More

    ಮರಳಿ ಮನೆ ಸೇರಿದ ‘ರಾಮ’ಕೃಷ್ಣ, : “ದೊಡ್ಡಮನಿ’ಗಳ ನಡುವಿನ ಮನಸ್ತಾಪ ಅಂತ್ಯ

    ಶಿವಾನಂದ ಹಿರೇಮಠ, ಗದಗ
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಡೆದು ಹೋಳಾಗಿದ್ದ “ದೊಡ್ಡಮನಿ’ ಈಗ ಮತ್ತೆ ಒಂದಾಗಿದೆ. ತಾಲೂಕಿನ ಹುಲಕೋಟಿ ಗ್ರಾಮದ ಕೃಷಿವಿಜ್ಞಾನ ಕೇಂದ್ರದಲ್ಲಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ, ಶಾಸಕ ಜಿ.ಎಸ್​. ಪಾಟೀಲ ನೇತೃತ್ವದಲ್ಲಿ ಶುಕ್ರವಾರ ಜರುಗಿದ ಸಂಧಾನ ಸಭೆಯಲ್ಲಿ ರಾಮಕೃಷ್ಣ ದೊಡ್ಡಮನಿ ಮತ್ತು ಸುಜಾತಾ ದೊಡ್ಡಮನಿ ನಡುವಿನ ಮನಸ್ತಾಪಗಳಿಗೆ ಅಂತ್ಯ ಹೇಳಲಾಗಿದೆ. ವಿಧಾನಸಭಾ ಚುನಾವಣೆ ನಂತರ ಉತ್ತರ ಮತ್ತು ದಣ ದೃವಕ್ಕೆ ಮುಖ ಮಾಡುತ್ತಿದ್ದ ರಾಮಕೃಷ್ಣ ಮತ್ತು ಸುಜಾತಾ ಅವರು ಶುಕ್ರವಾರದ ಕಾರ್ಯಕ್ರಮದಲ್ಲಿ ನಗುಮೊಗದಲ್ಲೇ ಪರಸ್ಪರ ಶುಭಾಶಯ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಸಚಿವ ಎಚ್​.ಕೆ. ಪಾಟೀಲ ರಾಮಕೃಷ್ಣ ದೊಡ್ಡಮನಿ ಅವರನ್ನು ಕಾಂಗ್ರೆಸ್​ ಪಕ್ಷಕ್ಕೆ ಮರಳಿ ಸೇರ್ಪಡೆಗೊಳಿಸಿದರು.
    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಟಿಕೆಟ್​ ವಂಚಿತರಾಗಿದ್ದ ರಾಮಕೃಷ್ಣ ದೊಡ್ಡಮನಿ ಪಕ್ಷೇತರ ಸ್ಪಧಿರ್ಸಿ, ಕಾಂಗ್ರೆಸ್​ ಅಭ್ಯಥಿರ್ ಸುಜಾತಾ ಅವರಿಗೆ ಸೋಲಿಗೆ ನೇರ ಕಾರಣ ಆಗಿದ್ದರು. ಟಿಕೆಟ್​ ವಂಚಿತರಾಗಿದ್ದ ರಾಮಕೃಷ್ಣ ಬಹಿರಂಗವಾಗಿಯೇ ಕಾಂಗ್ರೆಸ್​ ಮುಖಂಡರನ್ನು ಆಪಾದಿಸಿದ್ದರು. ಪಕ್ಷೇತರ ಸ್ಪರ್ಧೆಗೂ ಮುನ್ನ ಸ್ಪಧಿರ್ಸದಂತೆ ಮನವೊಲಿಸುವ ಪ್ರಯತ್ನವೂ ನಡೆದಿತ್ತು. ಆದರೆ, ತಮ್ಮ ಬಲ ಪ್ರದರ್ಶನದೊಂದಿಗೆ ಚುನಾವಣಾ ಲಿತಾಂಶದಲ್ಲಿ ಕಾಂಗ್ರೆಸ್​ ಅಭ್ಯಥಿರ್ಯನ್ನು ಹಿಂದಿಕ್ಕಿದ್ದರು. ತದ ನಂತರ ರಾಮಕೃಷ್ಣ ಮತ್ತು ಸುಜಾತಾ ನಡುವೆ ಮುಂದುವರಿದಿದ್ದ ಶೀತಲ ಸಮರ ಶುಕ್ರವಾರ ಅಂತ್ಯಗೊಂಡಿದೆ.

    ಸಮುದಾಯದ ಗಾಳ:
    ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ ನೇತೃತ್ವದಲ್ಲಿ ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಕಾಂಗ್ರೆಸ್​ ಪಕ್ಷ ಸೇರಲು ಇಚ್ಚೀಸಿದ್ದ ರಾಮಕೃಷ್ಣ ನಡೆ ಬಗ್ಗೆ ಸುಜಾತಾ ದೊಡ್ಡಮನಿ ಅಸಮಧಾನ ವ್ಯಕ್ತಪಡಿಸಿದ್ದರು. ಸೋಲಿನಿಂದ ವಿಚಲಿತರಾಗಿದ್ದ ಸುಜಾತಾ ದೊಡ್ಡಮನಿ ಹಲವು ಬಾರಿ ರಾಮಕರಷ್ಣ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಸಮುದಾಯದ ಗಾಳ ಊರುಳಿಸಿದ್ದರು. ಆದರೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​ ಅಭ್ಯಥಿರ್ ಆನಂದ ಗಡ್ಡದೇವರಮಠ ಅವರಿಗೂ ರಾಮಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದು ಮತಬ್ಯಾಂಕ್​ ದೃಷ್ಟಿಕೋನದಿಂದ ಅನಿವಾರ್ಯವಿತ್ತು. ಹಾಗಾಗಿ ಹಲವು ಬಾರಿ ಕಾಂಗ್ರೆಸ್​ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

    ಜಿದ್ದಾಜಿದ್ದಿ ಕಣ:
    ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳೆರಡೂ ವಿರಶೈವ ಲಿಂಗಾಯತ ಸಮುದಾಯದ ಅಭ್ಯಥಿರ್ಗಳನ್ನೇ ಕಣಕ್ಕೆ ಇಳಿಸಿದ್ದರಿಂದ ಕ್ಷೇತ್ರದಲ್ಲಿ ಜಿದ್ದಾ ಜಿದ್ದಿ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ, ಯಾರನ್ನೂ ನಿರ್ಲಕ್ಷ$್ಯ ವಹಿಸಬಾರದು ಎಂಬ ಸತ್ಯ ಜಿಲ್ಲಾ ಕಾಂಗ್ರೆಸ್​ ಮುಖಂಡರಿಗೂ ಅರಿವಿದೆ. ಅದರಲ್ಲೂ, ಶಿರಹಟ್ಟಿ ಮತಕ್ಷೇತ್ರದಲ್ಲಿ ರಾಮಕೃಷ್ಣ ಅವರನ್ನು ಅಲ್ಲಗಳೆಯುವಂತಿಲ್ಲ ಎಂಬ ಕಹಿ ಸತ್ಯ ಕಾಂಗ್ರೆಸ್​ ಮುಖಂಡರಿಗೂ ಗೊತ್ತಿದೆ. ಇನ್ನೂ ಸುಜಾತಾ ಮತ್ತು ರಾಮಕೃಷ್ಣ ನಡುವಿನ ಮನಸ್ತಾಪದಿಂದ ಶಿರಹಟ್ಟಿ, ಮುಂಡರಗಿ ಮತ್ತು ಲಕ್ಷೇಶ್ವರ ಭಾಗದಲ್ಲಿ ಕಾಂಗ್ರೆಸ್​ಗೆ ಹಿನ್ನಡೆ ಆಗಲಿದೆ ಎಂಬುದು ಕಾಂಗ್ರೆಸ್​ ಲೆಕ್ಕಾಚಾರ ಆಗಿತ್ತು. ಹೀಗಾಗಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ, ಶಾಸಕ ಜಿ.ಎಸ್​. ಪಾಟೀಲ ರಾಮಕೃಷ್ಣರನ್ನು ಕರೆತರುವ ಆಸಕ್ತಿ ವಹಿಸಿದವರಲ್ಲಿ ಮೊದಲಿಗರಾಗಿದ್ದರು. ಹಲವು ಪ್ರಯತ್ನಗಳ ನಂತರ ರಾಮಕೃಷ್ಣರನ್ನು ಮರಳಿ ಕರೆತರುವಲ್ಲಿ ಯಶಸ್ವಿ ಆಗಿದ್ದಾರೆ.

    ಶಿರಹಟ್ಟಿ ಕ್ಷೇತ್ರದಲ್ಲಿ ಪ್ರಭಾವ:
    ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪಧಿರ್ಸಿದ್ದ ರಾಮಕೃಷ್ಣ 40 ಸಾವಿರಕ್ಕೂ ಅಧಿಕ ಮತ ಪಡೆದು ಕ್ಷೇತ್ರದಲ್ಲಿ ನಾನೇ ಪ್ರಭಾವಿ ಎಂಬುದನ್ನು ಕಾಂಗ್ರೆಸ್​ ಪಕ್ಷಕ್ಕೆ ಗೊತ್ತು ಮಾಡಿದ್ದರು. ಕ್ಷೇತ್ರದಲ್ಲಿ ಜಾತ್ಯಾತಿತವಾಗಿ ಹಲವು ಸಮುದಾಯದ ಜನರ ಬೆಂಬಲ ರಾಮಕೃಷ್ಣರಿಗೆ ಎಂಬುದು ಲಿತಾಂಶದ ನಂತರ ಸ್ಪಷ್ಟವಾಗಿತ್ತು. ರಾಮಕೃಷ್ಣ ಸ್ಪರ್ಧೆಯಿಂದ ಕಾಂಗ್ರೆಸ್​ ಅಭ್ಯಥಿರ್ ಸುಜಾತಾ ದೊಡ್ಡಮನಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಇಬ್ಬರ ಜಗಳಲ್ಲಿ ಬಿಜೆಪಿಗೆ ಲಾಭವಾಗಿತ್ತು. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಶಾಸಕ ರಾಮಣ್ಣ ಲಮಾಣಿ, ಕಾಂಗ್ರೆಸ್​ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್​ ತೆಕ್ಕೆಯಲ್ಲಿ ಇರುವುದರಿಂದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ & ಕಾಂಗ್ರೆಸ್​ ನಡುವೆ ಮತ ಪ್ರಮಾಣದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts