More

    ಮರಳಿನಲ್ಲಿ ಅರಳಿದ ವಿಶ್ವೇಶತೀರ್ಥ ಶ್ರೀ

    ಧಾರವಾಡ: ಇಲ್ಲಿನ ಕೆಲಗೇರಿ ರಸ್ತೆ ಸಾಯಿನಗರದಲ್ಲಿನ ಶಿರಡಿ ಸಾಯಿಬಾಬಾ ಮಂದಿರ ಆವರಣದಲ್ಲಿ ಸೋಮವಾರ ಮರಳಿನಲ್ಲಿ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭಾವಚಿತ್ರ ಬಿಡಿಸುವ ಮೂಲಕ ನಮನ ಸಲ್ಲಿಸಲಾಯಿತು.

    ನಗರದ ಕಲಾವಿದ ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ಶ್ರೀಗಳ ಭಾವಚಿತ್ರ ಬಿಡಿಸಿದ ಕಲಾಕೃತಿ ಎಲ್ಲರ ಗಮನ ಸೆಳೆಯಿಯಿತು.

    ನಂತರ ಶಿರಡಿ ಸಾಯಿಬಾಬಾ ಸಂಸ್ಥೆ ಅಧ್ಯಕ್ಷ ಮಹೇಶ ಶೆಟ್ಟಿ ಮಾತನಾಡಿ, ವಿಶ್ವೇಶತೀರ್ಥರು ಯಾವುದೇ ಧರ್ಮ, ಜಾತಿ, ಪಂಥ ಎಂಬ ತಾರತಮ್ಯ ಮಾಡುತ್ತಿರಲಿಲ್ಲ. ಮಾಧ್ವ ಬ್ರಾಹ್ಮಣ ಸ್ವಾಮೀಜಿ ಆಗಿದ್ದರೂ ದಲಿತ ಕೇರಿ ಪ್ರವೇಶಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಮುಸಲ್ಮಾನ ಧರ್ಮದ ಕಾರು ಚಾಲಕನನ್ನು ಇಟ್ಟುಕೊಂಡಿದ್ದು ಮಾನವೀಯತೆಗೆ ನಿದರ್ಶನವಾಗಿದೆ. ಅಪಾರ ರಾಷ್ಟ್ರ ಪ್ರೇಮಿಯಾಗಿದ್ದ ಶ್ರೀಗಳ ಅಗಲಿಕೆ ದೇಶಕ್ಕೆ ಯೋಗ್ಯ ಮಾರ್ಗದರ್ಶಕರ ಕೊರತೆ ಸೃಷ್ಟಿಸಿದೆ ಎಂದು ಸ್ಮರಿಸಿದರು.

    ಉದಯ ಶೆಟ್ಟಿ, ರಮೇಶ ನಾರಾಯಣಕರ, ಗುರುಪಾದಯ್ಯ ಹೊಂಗಲಮಠ, ಸಂತೋಷ ಮಿಕಲಿ, ಸಂತೋಷ ಮಹಾಲೆ, ರಾಜೇಶ್ವರಿ ನರೇಂದ್ರ, ಜಯಶ್ರೀ ಶಿವಪೂಜಿ, ಸಾಯಿ ಭಜನಾ ಮಂಡಳಿ ಮತ್ತು ಪಲ್ಲಕ್ಕಿ ಸೇವಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

    ಪೇಜಾವರ ಶ್ರೀಗಳಿಗೆ ನುಡಿನಮನ

    ಹುಬ್ಬಳ್ಳಿ: ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥರು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಎಲ್ಲ ಸಮೂಹ ವಿಭಾಗದಿಂದ ನುಡಿನಮನ ಸಲ್ಲಿಸಲಾಯಿತು.

    ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಪುನೀತಕುಮಾರ ಬೆನಕನವಾರಿ, ಬಿ.ಇಡಿ ಪ್ರಾಚಾರ್ಯ ಡಾ.ಎನ್.ಡಿ. ಶೇಖ್, ಪದವಿ ಪ್ರಾಚಾರ್ಯ ಬಸವರಾಜ ಮಡ್ಲಿ, ಎಂ.ಇಡಿ ಸಂಯೋಜಕ ಡಾ. ಪಂಪಾಪತಿ ಹೆಗಡಿ, ಪ್ರೊ.ಡಿ.ಎಚ್. ನಾಯಕ್, ಪತ್ರಿಕೋಧ್ಯಮ ವಿಭಾಗದ ಸಂಯೋಜಕ ಬೀರೇಶ ತಿರಕಪ್ಪನವರ, ದೈಹಿಕ ಶಿಕ್ಷಣ ವಿಭಾಗದ ಬಸವರಾಜ ದೇವರಮನಿ, ಅಪರಾಧಶಾಸ್ತ್ರ ವಿಭಾಗದ ರಾಜಶೇಖರ ಜೂಚನಿ, ಇಂಗ್ಲಿಷ್ ವಿಭಾಗದ ರವಿಕುಮಾರ ಬೆಲ್ಲದ, ಉಪನ್ಯಾಸಕಿ ದೀಪಾ ಸಿ. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ವ್ಯಾಪಾರಸ್ಥರ ಸಂಘ: ರಾಷ್ಟ್ರಸಂತ ಶ್ರೀ ವಿಶ್ವೇಶ ತೀರ್ಥರು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವ್ಯಾಪಾರಸ್ಥರ ಸಂಘ ಸಂತಾಪ ಸೂಚಿಸಿದೆ. ಸನ್ಯಾಸತ್ವದ ನಡುವೆ ಶ್ರೀಗಳು ಸಮಾಜಸೇವೆ ಮಾಡುತ್ತಿದ್ದರು. ಅವರು ಸಮಸಮಾಜದ ನಿರ್ವತೃಗಳು ಎಂದು ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪೂರ, ಉಪಾಧ್ಯಕ್ಷ ಶಂಕರ ನೇಗಿನಹಾಳ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ, ಸಹಗೌರವ ಕಾರ್ಯದರ್ಶಿ ರಘುನಾಥ ಕಲಬುರ್ಗಿ, ಮೋಹನ ಸೋಳಂಕಿ, ರಾಜಶೇಖರ ಬತ್ಲಿ, ಜಿ.ಆರ್. ಬೆಲ್ಲದ, ಆರ್.ಬಿ. ವಾಲಿ ಇತರರು ನುಡಿನಮನ ಸಲ್ಲಿಸಿದ್ದಾರೆ.

    ಸಂಘ: ಪೇಜಾವರ ಶ್ರೀ ವಿಶ್ವೇಶ ತೀರ್ಥರ ನಿಧನಕ್ಕೆ ಹುಬ್ಬಳ್ಳಿ ಜಂಗಮಾಭಿವೃದ್ಧಿ ಸಂಘ ಸಂತಾಪ ಸೂಚಿಸಿದೆ. ನಗರದಲ್ಲಿ ನಡೆದ ಸಭೆಯಲ್ಲಿ ಶ್ರೀಗಳಿಗೆ ನುಡಿ ನಮನ ಸಲ್ಲಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಎನ್.ಬಿ. ಹಿರೇಮಠ, ನ್ಯಾಯವಾದಿ ಜಿ.ಆರ್. ಅಂದಾನಿಮಠ, ವರ್ತಕ ಜಿ.ಎಂ. ಚಿಕ್ಕಮಠ, ಇ.ಎಲ್. ಹಿರೇಮಠ, ಎಸ್.ಎಂ. ರುದ್ರಯ್ಯ, ಕಾಡಯ್ಯ ಹಿರೇಮಠ ಇತರರು ಇದ್ದರು.

    ಕಾನೂನು ಕಾಲೇಜ್: ಶ್ರೀಗಳ ಅಗಲಿಕೆಗೆ ನಗರದ ಜೆಎಸ್​ಎಸ್ ಸಕ್ರಿ ಕಾನೂನು ಕಾಲೇಜ್​ನಲ್ಲಿ ಸಂತಾಪ ಸಭೆ ನಡೆಸಿ, ಮೌನಾಚರಣೆ ಮಾಡಲಾಯಿತು. ಪ್ರಾಚಾರ್ಯು ಡಾ. ರೂಪಾ ಇಂಗಳಹಳ್ಳಿ, ಶ್ರೀಗಳ ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದರು.

    ಕಾಂಗ್ರೆಸ್: ವಿಶ್ವ ಸಂತನ ನಿರ್ಗಮನಕ್ಕೆ ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಯುವ ಕಾಂಗ್ರೆಸ್ ಸಮಿತಿ ಮಾಜಿ ರಾಜ್ಯಾಧ್ಯಕ್ಷ ಸದಾನಂದ ಡಂಗನವರ ಸಂತಾಪ ಸೂಚಿಸಿದ್ದಾರೆ. ಶ್ರೀಗಳ ಆದರ್ಶ, ಉದಾತ್ತ ಚಿಂತನೆಗಳು ನಮಗೆಲ್ಲ ದಾರಿದೀಪ ಎಂದು ನುಡಿನಮನ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts