More

    ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ, ಯಶವಂತರಾಯಗೌಡ ಪಾಟೀಲ ಪೆನಲ್‌ಗೆ ಗೆಲುವು

    ಇಂಡಿ: ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ನೇತೃತ್ವದ ಪೆನಲ್ ಭರ್ಜರಿ ಜಯ ಸಾಧಿಸಿದೆ.

    ಕಣದಲ್ಲಿದ್ದ 8 ಅಭ್ಯರ್ಥಿಗಳು ಅತ್ಯಧಿಕ ಮತ ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಅ ವರ್ಗದಿಂದ ಶಾಸಕ ಯಶವಂತರಾಯಗೌಡ ಪಾಟೀಲ ನೇತೃತ್ವದ ಪೆನಲ್ ಅಭ್ಯರ್ಥಿಗಳಾದ ಬಸವರಾಜ ಸಿದ್ರಾಮಪ್ಪ ಧನಶ್ರೀ 1475, ಮಲ್ಲನಗೌಡ ರಾಮಚಂದ್ರಗೌಡ ಪಾಟೀಲ 1615, ಯಶವಂತರಾಯಗೌಡ ಪಾಟೀಲ 1716, ರೇವಗೊಂಡಪ್ಪ ಅಣ್ಣಾರಾಯ ಪಾಟೀಲ 1560, ಮತ್ತು ಸಿದ್ದಣ್ಣ ರಾಮಣ್ಣ ಬಿರಾದಾರ ಅವರಿಗೆ 1485 ಮತಗಳು ಬಂದಿವೆ. ಮಹಿಳಾ ಮೀಸಲು ಸ್ಥಾನದ ಲಲಿತಾ ಅಡಿವೆಪ್ಪ ನಡಗೇರಿ 1481 ಮತ್ತು ಸರೋಜಿನಿ ಸಿದ್ದಾರಾಯ ಪಾಟೀಲ ಅವರಿಗೆ 1356 ಮತಗಳು ಲಭಿಸಿವೆ. ಪರಿಶಿಷ್ಟ ಜಾತಿಯ ಮೀಸಲು ಸ್ಥಾನದ ಅಶೋಕ ಅಂಬಾಜಿ ಗಜಾಕೋಶ ಅವರಿಗೆ 1424 ಮತಗಳು ಬಂದಿವೆ.

    ವಿರೋಧಿ ಗುಂಪಿನ ಸ್ಪರ್ಧಿಗಳಾಗಿದ್ದ ಸಾಮಾನ್ಯ ‘ಅ’ ವರ್ಗದ ಚಂದ್ರಕಾಂತ ಬೋರಗಿ ಅವರಿಗೆ 80, ನಾಗನಾಥ ಬಿರಾದಾರ ಅವರಿಗೆ 301 ಹಾಗೂ ಡಾ.ಸಾರ್ವಭೌಮ ಬಗಲಿ ಅವರಿಗೆ 400 ಮತಗಳು ಹಾಗೂ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದ ಮುತ್ತಪ್ಪ ಪೋತೆ ಅವರಿಗೆ 314 ಮತಗಳು, ಮಹಿಳಾ ಮೀಸಲು ಸ್ಥಾನದ ದಾನಮ್ಮ ಕರಬಸಪ್ಪ ಬಿರಾದಾರ ಅವರಿಗೆ 441 ಮತಗಳು ಬಂದಿದ್ದು, ಪರಾಭವಗೊಂಡಿದ್ದಾರೆ.

    ಕಾಂಗ್ರೆಸ್ ಕಾರ್ಯಕರ್ತರು, ಯಶವಂತರಾಯಗೌಡ ಪಾಟೀಲರ ಅಭಿಮಾನಿಗಳು ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಲ್ಲದೆ ಶಾಸಕ ಪಾಟೀಲರು ಕಾರ್ಖಾನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಎತ್ತಿ ಕುಣಿದು ಕುಪ್ಪಳಿಸಿ ಜೆಸಿಬಿ ಯಂತ್ರದಿಂದ ಪುಷ್ಪಾರ್ಚನೆ ಮಾಡಿ ಜಯಕಾರ ಕೂಗಿದರು.

    ವಿಜಯೋತ್ಸವದಲ್ಲಿ ಪಾಪು ಕಿತ್ತಲಿ, ಮಂಜು ಕಾಮಗೊಂಡ, ಸತೀಶ ಕುಂಬಾರ, ಇಲಿಯಾಸ ಬೋರಾಮಣಿ, ಜಾವೀದ್ ಮೋಮಿನ್, ಶಿವಕುಮಾರ ಬಿಸನಾಳ, ಅವಿನಾಶ ಬಗಲಿ, ಧನರಾಜ ಮುಜಗೊಂಡ, ಧರ್ಮು ವಾಲೀಕಾರ, ಹುಚ್ಚಪ್ಪ ತಳವಾರ, ಪ್ರಶಾಂತ ಕಾಳೆ, ಸಂತೋಶ ಪರಸೇನವರ, ಮಹೇಶ ಹೊನ್ನಬಿಂದಗಿ, ರುದ್ರು ಅಲಗೊಂಡ, ಸತೀಶ ಹತ್ತಿ, ರಮೇಶ ಕಲ್ಯಾಣಿ, ಚಂದ್ರಶೇಖರ ರೂಗಿ, ಅಯೂಬ ಬಾಗವಾನ, ಮುಸ್ತಾಕ ಇಂಡೀಕರ್, ಜೀತಪ್ಪ ಕಲ್ಯಾಣಿ, ನೀಲಕಂಠಗೌಡ ಪಾಟೀಲ, ರಾಜು ಕುಲಕರ್ಣಿ, ಸಂದೇಶ ಗಲಗಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts