More

    ಮನೆ ಮನೆಗೆ ತೆರಳಿ ಆಸ್ತಿ ಸಮೀಕ್ಷೆ ಮಾಡಿ

    ಬಸವಕಲ್ಯಾಣ:ಮನೆ ಮನೆಗೆ ತೆರಳಿ ಆಸ್ತಿ ಸಮೀಕ್ಷೆ ಮಾಡಬೇಕು ಹಾಗೂ ಪಿಒಎಸ್ ತಂತ್ರಾಂಶದಲ್ಲಿಯೇ ಕರ ವಸೂಲಾತಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲ ಗ್ರಾಪಂಗಳಿಗೆ ಪಿಒಎಸ್ ತಂತ್ರಾಂಶಗಳನ್ನು ನೀಡಲಾಗಿದ್ದು, ಸಿಬ್ಬಂದಿ ತಪ್ಪದೇ ಅದರಲ್ಲೇ ಕರ ವಸೂಲಾತಿ ಮಾಡಬೇಕು ಎಂದು ಸೂಚಿಸಿದರು.

    ಸರ್ಕಾರದ ಆದೇಶದಂತೆ ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಮೂಲಸೌಕರ್ಯ ಒಳಗೊಂಡ ಕಟ್ಟಡ ಗುರುತಿಸಿ ಶಿಶು ಪಾಲನಾ ಕೇಂದ್ರ ಪ್ರಾರಂಭಿಸಬೇಕು.ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ಆಯ್ಕೆಯಾದ ಗ್ರಾಪಂಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಗೃಹ ಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ಗ್ರಾಪಂ, ಬಾಪೂಜಿ ಸೇವಾ ಕೇಂದ್ರದ ಮೂಲಕ ಸಲ್ಲಿಸಲು ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ತಾಕೀತು ಮಾಡಿದರು.

    ಜಿಪಂ ಎಎಸ್ ಜಯಪ್ರಕಾಶ ಚವ್ಹಾಣ್ ಮಾತನಾಡಿ, ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಿ ಅದಕ್ಕೆ ಸಂಬAಧಪಟ್ಟ ಭಾವಚಿತ್ರ ಜಿಪಂಗೆ ಸಲ್ಲಿಸಬೇಕು. ಜಿಪಂ ಉಪ ಕಾರ್ಯದರ್ಶಿ ನೀಡಿದ ಸೂಚನೆಗಳನ್ನು ತಪ್ಪದೇ ಪಾಲಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

    ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ತಾಲೂಕು ಯೋಜನಾಧಿಕಾರಿ ರಾಜಶೇಖರ ನೆಲ್ಲಿ, ತಾಪಂ ಎಡಿ ಅರುಣಕುಮಾರ ಪಾಟೀಲ್, ಅಧಿಕಾರಿಗಳಾದ ಸಂತೋಷ ಚವ್ಹಾಣ್, ಅಹ್ಮದ್, ರಾಜರೆಡ್ಡಿ ಪಾಟೀಲ್ ಹಾಗೂ ಪಿಡಿಒ, ಕಾರ್ಯದರ್ಶಿಗಳು, ಡಿಇಒ ಭಾಗವಹಿಸಿದ್ದರು. ಜಿಪಂ ಉಪ ಕಾರ್ಯದರ್ಶಿಗಳಾಗಿ ಪ್ರಥಮ ಬಾರಿ ಬಸವಕಲ್ಯಾಣಕ್ಕೆ ಆಗಮಿಸಿದ ಸೂರ್ಯಕಾಂತ ಬಿರಾದಾರ ಹಾಗೂ ಎಎಸ್ ಜಯಪ್ರಕಾಶ ಚವ್ಹಾಣ್ ಅವರನ್ನು ತಾಪಂ, ಪಿಡಿಒ, ಡಿಇಒ ಸಂಘದಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts