More

    ಮನೆ ಬಾಗಿಲಿಗೆ ಬಂತು ದಾಖಲೆ

    ನರಗುಂದ: ಇನಾಂ ರದ್ದತಿ ಕಾಯ್ದೆ ಬಳಿಕ ಕಂದಾಯ ಇಲಾಖೆಯ ಎಲ್ಲ ದಾಖಲಾತಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕ್ರಾಂತಿಕಾರಿ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಮಹತ್ವದ ಯೋಜನೆಯಿಂದ ರಾಜ್ಯದ ಲಕ್ಷಾಂತರ ಜನ ಅನ್ನದಾತರಿಗೆ ಸಾಕಷ್ಟು ಅನುಕೂಲತೆಗಳಾಗಲಿವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

    ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಮನೆ ಬಾಗಿಲಿಗೆ ಪಿಂಚಣಿ, ಕೋವಿಡ್​ನಿಂದ ಮೃತಪಟ್ಟ ವಾರಸುದಾರರಿಲ್ಲದ ಶವಗಳಿಗೆ ಸರ್ಕಾರದಿಂದಲೇ ಅಂತ್ಯ ಸಂಸ್ಕಾರ ನೆರವೇರಿಸುವುದು ಸೇರಿದಂತೆ ಹತ್ತಾರು ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಹಗಲಿರುಳು ಶ್ರಮಿಸಿದ್ದಾರೆ. ಇದೀಗ ಕಂದಾಯ ದಾಖಲೆ ಮನೆ ಬಾಗಿಲಿಗೆ ವಿನೂತನ ಕಾರ್ಯಕ್ರಮದಿಂದ ರೈತರು ವಿನಾಕಾರಣ ಕಚೇರಿಗಳಿಗೆ ಅಲೆದಾಡುವುದು, ಮಧ್ಯವರ್ತಿಗಳ ಹಾವಳಿ, ಸಮಯದ ಉಳಿತಾಯದ ಜತೆಗೆ ಭ್ರಷ್ಟಾಚಾರಕ್ಕೆ ಶಾಶ್ವತ ಮುಕ್ತಿ ನೀಡಿದಂತಾಗುತ್ತದೆ. ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದೆ’ ಎಂದು ತಿಳಿಸಿದರು.

    ತಹಸೀಲ್ದಾರ್ ಎ.ಡಿ. ಅಮರವದಗಿ ಮಾತನಾಡಿ, ರಾಜ್ಯ ಸರ್ಕಾರದ ವಿನೂತನ ಕಾರ್ಯಕ್ರಮದಿಂದ ನರಗುಂದ ಮತ್ತು ಕೊಣ್ಣೂರ ಹೋಬಳಿ ವ್ಯಾಪ್ತಿಯ 35 ಗ್ರಾಮಗಳಲ್ಲಿ 9950 ಚೆಕ್​ಲಿಸ್ಟ್, 2515 ಆರ್​ಟಿಸಿ, 7311 ನಕ್ಷೆ, 3756 ಜಾತಿ ಮತ್ತು ಆದಾಯ ದಾಖಲಾತಿ ಪ್ರಮಾಣ ಪತ್ರಗಳನ್ನು ರೈತರಿಗೆ ಶನಿವಾರ ಒಂದೇ ದಿನ 8500 ಕವರ್​ಗಳಲ್ಲಿ ಹಾಕಿ ಕೊಡಲಾಗಿದೆ ಎಂದು ತಿಳಿಸಿದರು.

    ಕಂದಾಯ ನೀರಿಕ್ಷಕ ಕೆ.ಆರ್. ಆರೇರ, ಎಸ್.ಎಲ್. ಪಾಟೀಲ, ಎ.ಸಿ. ಶೆಟ್ಟಿ, ಸಂಜು ಉಳ್ಳಾಗಡ್ಡಿ, ಚಂದ್ರು ದಂಡಿನ, ಮಂಜುನಾಥ ಮೆಣಸಗಿ, ಬಿ.ಬಿ. ಐನಾಪೂರ, ಶಿವಾನಂದ ಮುತವಾಡ, ಬಸನಗೌಡ ಪಾಟೀಲ, ಚಂದ್ರು ಮೊರಬದ, ಮಲ್ಲಪ್ಪ ಮೇಟಿ, ಲಕ್ಷ್ಮವ್ವ, ಶಂಕರಪ್ಪ ತೆಗ್ಗಿನಮನಿ, ಬಸನಗೌಡ ಚಿಕ್ಕನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts