More

    ಮನೆ ಬಾಗಿಲಲ್ಲಿ ಹಣ ಪಡೆಯುವ ವ್ಯವಸ್ಥೆ

    ಹಾವೇರಿ: ಕರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನತೆ ಹಣಕ್ಕಾಗಿ ಬ್ಯಾಂಕ್​ಗೆ ಬರದಂತೆ ತಡೆಯಲು ಅಂಚೆಯಣ್ಣರನ್ನೇ ಜನರಲ್ಲಿಗೆ ಕಳಿಸಲು ಅಂಚೆ ಇಲಾಖೆ ಸನ್ನದ್ಧವಾಗಿದೆ.

    ವಿಶೇಷವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅವಶ್ಯಕ ಸೇವೆಗಳನ್ನು ಒದಗಿಸಲು ಅಂಚೆ ಇಲಾಖೆ ತಯಾರಿ ನಡೆಸಿದ್ದು, ಗ್ರಾಮೀಣ ಜನತೆ ಹತ್ತಿರದ ಅಂಚೆ ಇಲಾಖೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಗ್ರಾಮೀಣ ಜನತೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಇತರೆ ಬ್ಯಾಂಕ್​ನ ವ್ಯವಹಾರಗಳು ಅಂದರೆ ಹಣ ಹಿಂಪಡೆಯುವುದು, ಬ್ಯಾಲೆನ್ಸ್ ವಿಚಾರಣೆ, ಖಾತೆಯ ವ್ಯವಹಾರದ ವಿಚಾರಣೆಯನ್ನು ಹತ್ತಿರದ ಅಂಚೆ ಕಚೇರಿ ವಿಶೇಷವಾಗಿ ಗ್ರಾಮೀಣ ಅಂಚೆ ಕಚೇರಿಗಳ ಪೋಸ್ಟ್ ಮಾಸ್ಟರ್, ಗ್ರಾಮೀಣ ಅಂಚೆ ಸೇವಕರಿಗೆ ತಿಳಿಸಿದಲ್ಲಿ ಅವರು ತಮ್ಮ ಮನೆಗೆ ಬಂದು ಹಣ ಪೂರೈಸುವರು. ಈ ಸಂದರ್ಭದಲ್ಲಿ ಆಧಾರ್ ನಂಬರ್, ಖಾತೆ ನಿರ್ವಹಿಸುವ ಬ್ಯಾಂಕ್​ನ ನಂಬರ್, ಮೊಬೈಲ್ ನಂಬರ್ ಮತ್ತು ಖಾತೆದಾರರ ಬೆರಳಚ್ಚು ನೀಡಬೇಕಾಗುತ್ತದೆ. ಎಲ್ಲ ದಾಖಲೆಗಳ ಪರಿಶೀಲನೆ ಖಚಿತತೆ ಪ್ರಮಾಣೀಕರಿಸಿ ನಂತರ ಸೂಚಿಸಿದ ನಗದನ್ನು (ಗರಿಷ್ಠ 10 ಸಾವಿರ ರೂ. ವರೆಗೆ) ರಾಷ್ಟ್ರೀಕೃತ ಬ್ಯಾಂಕ್​ನಿಂದ ಹಿಂಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಸರ್ಕಾರ ಗ್ರಾಮೀಣ ಮಟ್ಟದ ಜನರಿಗೆ ವಿವಿಧ ಯೋಜನೆಗಳನ್ನು ಬ್ಯಾಂಕ್ ಮುಖಾಂತರ ನೀಡುತ್ತಿದೆ. ಜನರು ಎಟಿಎಂ ಹಾಗೂ ಬ್ಯಾಂಕ್​ಗಳಿಗೆ ತಿರುಗಾಡದೇ ತಮ್ಮೂರಿನ ಪೋಸ್ಟ್ ಆಫೀಸ್, ಪೋಸ್ಟ್​ಮೆನ್​ಗೆ ಕರೆ ಮೂಲಕ ಅಥವಾ ಮೌಖಿಕವಾಗಿ ತಿಳಿಸಿ ಹಣಕಾಸಿನ ವ್ಯವಹಾರ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ಅಂಚೆ ಕಚೇರಿ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

    ದೂರವಾಣಿ ವಿವರ: ಆಡೂರು ಉಪ ಅಂಚೆಕಚೇರಿ (08379-265221), ಅಗಡಿ ಉಪ ಅಂಚೆಕಚೇರಿ (08375-286133), ಅಕ್ಕಿಆಲೂರು ಉಪ ಅಂಚೆಕಚೇರಿ (08379-261229), ಬಂಕಾಪುರ ಉಪ ಅಂಚೆಕಚೇರಿ (08378-254267), ಬೆಳಗಾಲಪೇಟೆ ಉಪ ಅಂಚೆಕಚೇರಿ(08379-266234), ಬೊಮ್ಮನಹಳ್ಳಿ (08379-260221), ಬ್ಯಾಡಗಿ (08375-226560), ಚಳಗೇರಿ (08373-248786), ದುಂಡಶಿ (08378-251191), ಗುತ್ತಲ (08375-224624), ಹಲಗೇರಿ (08373-252661), ಹಾನಗಲ್ಲ (08379-262221), ಹಂಸಭಾವಿ (08376-289426), ಹಾವೇರಿ ಪ್ರಧಾನ ಅಂಚೆಕಚೇರಿ (08375-232213), ಹಿರೇಕೆರೂರ (08376-283451), ಹೊಸರಿತ್ತಿ (08375-287909), ಹುಲಗೂರ (08378-245330), ಕರ್ಜಗಿ (08375-239200), ಕಡಕೋಳ (08378-240002), ಕುಮಾರಪಟ್ಟಣ (08373-242201), ಮಾಸೂರು (08376-285666), ಮೆಡ್ಲೇರಿ (08373-245484), ಮೊಟೆಬೆನ್ನೂರ (08375-228560), ರಾಣೆಬೆನ್ನೂರ (08373-266470), ರಟ್ಟಿಹಳ್ಳಿ (08376-286330), ಸಂಗೂರು (08375-284582), ಸವಣೂರ (08378-241631), ಶಿಗ್ಗಾಂವಿ (08378-255721), ತಡಸ (08378-257491), ತಿಳವಳ್ಳಿ (08379-264228), ತುಮ್ಮಿನಕಟ್ಟಿ (08373-251602)ಯನ್ನು ಸಂರ್ಪಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts