More

    ಮನೆಯೊಳಗೆ ನುಗ್ಗುತ್ತಿದೆ ಮಳೆ ನೀರು

    ಸವಣೂರ: ತಾಲೂಕಿನ ಯಲವಿಗಿ ಗ್ರಾಮದ 3ನೇ ವಾರ್ಡ್ ನಿವಾಸಿಗಳ ಮನೆಯೊಳಗೆ ಮಳೆ ನೀರು ನುಗ್ಗುತ್ತಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ್ಕೆ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.20 ವರ್ಷಗಳ ಹಿಂದೆ ವಾರ್ಡ್​ನಲ್ಲಿ ಗಟಾರ ನಿರ್ವಿುಸಲಾಗಿತ್ತು. ಆದರೆ, ಈಗ ಗಟಾರ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಮಳೆ ಬಂದರೆ ನೀರನ್ನು ಹೊರ ಹಾಕುವುದೇ ನಿತ್ಯದ ಕಾಯಕವಾಗಿದೆ. ಈ ಕುರಿತು ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತವಾಗಿ ಮನವಿ ಸಲ್ಲಿಸಲಾಗಿದ್ದರೂ ಈತನಕ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಳೆ ನೀರು ನುಗ್ಗುವುದರಿಂದ ಮನೆಯಲ್ಲಿ ಶೇಖರಿಸಿಟ್ಟ ದವಸ ಧಾನ್ಯ ಸಂಪೂರ್ಣ ಹಾಳಾಗುತ್ತಿವೆ. ಮನೆಯವರ ಆರೋಗ್ಯವೂ ಹದಗೆಡುತ್ತಿದೆ. ಕೂಡಲೆ ಗ್ರಾಪ ಪಂಚಾಯಿತಿ ಅಧಿಕಾರಿಗಳು ಮನೆಯ ಮುಂದೆ ಗಟಾರ ನಿರ್ವಿುಸುವ ಮೂಲಕ ಬೇಡಿಕೆಗೆ ಸ್ಪಂದಿಸಬೇಕು ಎಂದು ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.

    ಗ್ರಾಮದ 3ನೇ ವಾರ್ಡ್​ನ ಮಸೂತಿ ಓಣಿಯಲ್ಲಿ ಗಟಾರ ನಿರ್ವಿುಸಲು ಕ್ರಿಯಾ ಯೋಜನೆ ಸಿದ್ಧಗೊಳಿಸಲಾಗಿದೆ. ಕೆಲವೇ ದಿನಗಳಲ್ಲಿ ಗಟಾರ ನಿರ್ವಿುಸಲಾಗುವುದು. ಸ್ಥಳೀಯ ಮುಖಂಡರೊಂದಿಗೆ ರ್ಚಚಿಸಿ ಸರ್ಕಾರಿ ಜಾಗವನ್ನು ತೆರವುಗೊಳಿ ಗಟಾರ ನಿರ್ವಿುಸಲಾಗುವುದು.
    | ಚಂದ್ರು ಲಮಾಣಿ, ಯಲವಿಗಿ ಗ್ರಾಪಂ ಪಿಡಿಒ

    ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಗ್ರಾಮದ 3ನೇ ವಾರ್ಡ್​ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಮಳೆಗೆ ಮನೆಯಲ್ಲಿ ನೀರು ನುಗ್ಗಿ ಸಾರ್ವಜನಿಕರು ನಿತ್ಯ ಗೋಳಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕು.
    | ರುದ್ರಮುನಿ ಹಿರೇಮಠ, ಯಲವಿಗಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts