More

    ಮನೆಗಳಿಗೆ ಶಾಶ್ವತ ಹಕ್ಕುಪತ್ರ ನೀಡಲು ಗಡುವು

    ಅಥಣಿ ಗ್ರಾಮೀಣ: ಕೃಷ್ಣ ನದಿ ತೀರದ ನೆರೆ ಸಂತ್ರಸ್ತರಿಗೆ ಡಿ. 19ರೊಳಗೆ ಮನೆಗಳಿಗೆ ಶಾಶ್ವತ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ಚಳಿಗಾಲ ಅಧಿವೇಶನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಎಚ್ಚರಿಕೆ ನೀಡಿದರು.

    ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ವಾಸವಿರುವ ನಾಗನೂರ ಪಿ.ಕೆ. ಗ್ರಾಮದ 53 ಸಂತ್ರಸ್ತ ಕುಟುಂಬಗಳಿಗೆ ಗುರುವಾರ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, 18 ವರ್ಷದ ಹಿಂದೆ ಮನೆ ಕಳೆದುಕೊಂಡು ನಿರ್ಗತಿಕರಾಗಿ ರಡ್ಡೇರಹಟ್ಟಿ ಗ್ರಾಮದಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ವಾಸವಿದ್ದಾರೆ. ಇಲ್ಲಿಯವರೆಗೆ ಇವರಿಗೆ ನಿವೇಶನದ ಹಕ್ಕು ಪತ್ರ ವಿತರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಳೆ ಬಂತೆಂದರೆ ಮಡ್ಡಿ ಬಸವಣ್ಣ ದೇವರ ಸಮುದಾಯ ಭವನದಲ್ಲಿ ಇವರ ವಾಸ ಅನಿವಾರ್ಯವಾಗಿದೆ. ಬೇಸಿಗೆಯಲ್ಲಿ ಪತ್ರಾಸ್ ಶೆಡ್‌ಗಳು ಕಾಯ್ದು ಗಿಡ-ಮರಗಳ ಕೆಳಗೆ ಇವರ ವಾಸ. ಪಡಿತರ ತರಲು ರಡ್ಡೇರಹಟ್ಟಿಯಿಂದ ನಾಗನೂರ ಪಿ.ಕೆ. ಗ್ರಾಮಕ್ಕೆ ಸಂಚಾರಿಸುತ್ತಾರೆ. ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರ ಸ್ವಗ್ರಾಮದ ಜನರ ಸ್ಥಿತಿ ಇದಾದರೆ ಉಳಿದವರ ಪಾಡೇನು ಎಂದು ಪ್ರಶ್ನಿಸಿದರು.

    ಶಾಸಕ ಮಹೇಶ ಕುಮಠಳ್ಳಿ ತಂದಿರುವ ಸಾವಿರಾರು ಕೋಟಿ ರೂ. ಅನುದಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, 19ರ ಒಳಗೆ ಹಕ್ಕು ಪತ್ರ ನೀಡದಿದ್ದರೆ ನಾಗನೂರ ಪಿ.ಕೆ. ಗ್ರಾಮದಿಂದ ಬೆಳಗಾವಿ ಸುವರ್ಣ ಸೌಧದವರೆಗೆ ಸಂತ್ರಸ್ತರೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಕಿಸಾನ್ ಫಟಕದ ಅಧ್ಯಕ್ಷ ಶಿವು ಗುಡ್ಡಾಪುರ ಮಾತನಾಡಿದರು. ಸುನೀಲ ಸಂಕ, ಸಿದ್ಧಾರ್ಥ ಶಿಂಗೆ, ರಾವಸಾಬ ಐಹೊಳಿ, ಶ್ರೀಕಾಂತ ಪೂಜಾರಿ, ಭೀಮಪ್ಪ ಯಕ್ಕುಂಡಿ, ರಮೇಶ ಪವಾರ, ಬಸವರಾಜ ಬುಟಾಳಿ, ಶಂಕರ ಮಗದುಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts