More

    ಮನುಷ್ಯನ ಸೌಂದರ್ಯಕ್ಕೆ ಸವಿತಾ ಮಹರ್ಷಿ ಕಾರಣ

    ಬೆಳಗಾವಿ: ಶಿವನು ಜಡೆಗಳನ್ನು ಬಿಟ್ಟಾಗ ಶಿವನ ಜಡೆಗಳನ್ನು ಸುಂದರವಾಗಿ ಕಾಣುವಂತೆ ಕತ್ತರಿಸಿ ಸುಂದರವಾಗಿ ಮಾಡಿದವರು ಸವಿತಾ ಮಹರ್ಷಿಯವರು ಎಂದು ಡಾ.ನಿರ್ಮಲಾ ಬಟ್ಟಲ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸವಿತಾ ಮಹರ್ಷಿ ಜಯಂತ್ಯುತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಶಿವನು ಸುಂದರವಾಗಿ ಕಾಣುತ್ತಿರುವುದರಿಂದ ಎಲ್ಲ ದೇವಾನು ದೇವತೆಗಳು ನಮ್ಮನ್ನು ಸುಂದರವಾಗಿ ಮಾಡಿ ಎಂದು ಸವಿತಾ ಮಹರ್ಷಿ ಅವರಿಗೆ ಹೇಳಿದ್ದರಿಂದ ಕ್ಷೌರಿಕ ವೃತ್ತಿ ಪ್ರಾರಂಭವಾಯಿತು. ಹೀಗೆ ಎಲ್ಲರೂ ಸುಂದರವಾಗಿ ಕಾಣುವಂತೆ ಮಾಡಿದ್ದು ಸವಿತಾ ಮಹರ್ಷಿಯವರು ಎಂದರು.

    ಜನರು ಸುಂದರವಾಗಿ ಕಾಣಲು ಕಾರಣರಾದ ಸವಿತಾ ಸಮುದಾಯದ ಅಭಿವೃದ್ಧಿ ಯಾಗಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಈ ಸಮುದಾಯ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಮೂಲ ಸೌಕರ್ಯಗಳು ದೊರಕಬೇಕು. ಆದ್ದರಿಂದ ಸವಿತಾ ಮಹರ್ಷಿಯವರ ಮಹತ್ವವನ್ನು ಅವರ ಇತಿಹಾಸ ತಿಳಿದುಕೊಂಡು ಎಲ್ಲರೂ ಜಾಗೃತರಾಗಬೇಕು ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಗಜಾನನ ಕಾಶೀದ, ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ನೀಲಮ್ಮ ಟಿಪ್ಪುಪುಡೆ, ಸಮಾಜದ ಮುಖಂಡರು, ಮಹಿಳೆಯರು ಹಾಗೂ ನೂರಾರು ಜನರು ಇದ್ದರು.

    ಭಾವಚಿತ್ರದ ಮೆರವಣಿಗೆ: ಇದಕ್ಕೂ ಮುನ್ನ ಬೆಳಗಾವಿಯ ಕೋಟೆ ಕೆರೆ ವೃತ್ತದಲ್ಲಿ ಸವಿತಾ ಮಹರ್ಷಿ ಜಯಂತ್ಯುತ್ಸವ ನಿಮಿತ್ತ ಸವಿತಾ ಮಹರ್ಷಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಅಪರ
    ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಚಾಲನೆ ನೀಡಿದರು. ಮೆರವಣಿಗೆಯು ಕೋಟೆ ಕೆರೆಯಿಂದ ಕುಮಾರಗಂಧರ್ವ ರಂಗಮಂದಿರ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts