More

    ಮನರಂಜನೆ ಆರೋಗ್ಯಕ್ಕೆ ಪೂರಕ

    ಚಿತ್ರದುರ್ಗ: ಸಾಹಿತ್ಯ, ಸಂಗೀತ, ನಾಟ್ಯ, ಹಾಸ್ಯ ಒಳಗೊಂಡು ಮನರಂಜನೆ ನೀಡುವ ಅನೇಕ ಕಲೆಗಳು ಆರೋಗ್ಯಕ್ಕೆ ಪೂರಕ ಎಂದು ವಕೀಲ ಬಿ.ಕೆ.ರಹಮತ್‌ವುಲ್ಲಾ ಅಭಿಪ್ರಾಯಪಟ್ಟರು.


    ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಗಾನಯೋಗಿ ಸಂಗೀತ ಬಳಗದಿಂದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿಂಗಳ ವಿಶೇಷ ವ್ಯಕ್ತಿ ಪರಿಚಯ, ಕವನ ಗಾಯನ, ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.


    ಇತಿಹಾಸ ಅವಲೋಕಿಸಿದರೆ ರಾಜ-ಮಹರಾಜರು ಒಳಗೊಂಡು ಕಲೆಗೆ ಮನಸೋಲದ ವ್ಯಕ್ತಿಗಳಿಲ್ಲ. ಅಂತಹ ಅದ್ಭುತ ಶಕ್ತಿ ಹೊಂದಿದ್ದು, ಕಲೆ ಮತ್ತು ಕಲಾವಿದರನ್ನು ಗೌರವದಿಂದ ಕಾಣುವುದರ ಜತೆಗೆ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.


    ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ, ಸಂಗೀತ ಮನಸ್ಸಿಗೆ ಉಲ್ಲಾಸ ನೀಡಿ ಉತ್ಸಾಹದಿಂದ ಇರಲು ಸಹಕಾರಿಯಾಗಿದೆ. ಇದರಲ್ಲಿ ವಿವಿಧ ಮಜಲುಗಳಿದ್ದು, ಹಲವು ಪರಿಕರ ಬಳಸುವ ಮೂಲಕ ಕಲಾವಿದರು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುತ್ತಾರೆ ಎಂದು ಹೇಳಿದರು.


    ಡಾ.ಚಾಂದಿನಿ ಖಲೀದ್, ಶೋಭಾ, ರೇಣುಕಾ, ಸತೀಶ್‌ಕುಮಾರ್, ಆರ್.ಜಿ.ವಿನಾಯಕ, ಮೀರಾ ನಾಡಿಗ್, ಕೆ.ಎಸ್.ತಿಪ್ಪಮ್ಮ, ಸುಮಾ ರಾಜಶೇಖರ್, ಮೊಹಮದ್ ಸಾದತ್, ಮೆಹಬೂಬಿ, ತಿಪ್ಪೀರಮ್ಮ, ನಿರ್ಮಲ್ ಇತರರು ಕವನ ವಾಚಿಸಿದರು.


    ಈಜು ತರಬೇತುದಾರ ಸೋಮಶೇಖರ್ ಮೈಲಾರ, ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್, ಅಧ್ಯಕ್ಷ ಡಾ.ಎಸ್.ಎಚ್.ಶಫೀವುಲ್ಲಾ, ಬಳಗದ ಅಧ್ಯಕ್ಷ ಎಂ.ತೋಟಪ್ಪ ಉತ್ತಂಗಿ, ಜಯದೇವಮೂರ್ತಿ, ತಿಂಗಳ ವಿಶೇಷ ವ್ಯಕ್ತಿ ಟಿ.ನಾಗರತ್ನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts