More

    ಮಧ್ಯಪ್ರದೇಶದ 50 ಕಾರ್ವಿುಕರ ಕಣ್ಣೀರು

    ಹುಬ್ಬಳ್ಳಿ: ದಿನಗೂಲಿ ಕೆಲಸಕ್ಕೆಂದು ಹೋಗಿ ಮಂಗಳೂರಿನಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ವಲಸೆ ಕಾರ್ವಿುಕರು ಮಂಗಳೂರಿನಿಂದ ಹುಬ್ಬಳ್ಳಿವರೆಗೆ 361 ಕಿ.ಮೀ. ನಡೆದುಕೊಂಡೇ ಬಂದಿದ್ದು, ಇಲ್ಲಿಂದ ತಮ್ಮ ಹುಟ್ಟೂರು ಮಧ್ಯಪ್ರದೇಶದ ಇಂದೋರ್​ಗೆ ಬಸ್ ವ್ಯವಸ್ಥೆ ಮಾಡುವಂತೆ ಕಣ್ಣೀರು ಇಡುತ್ತಿದ್ದಾರೆ.

    ಕೆಲ ತಿಂಗಳ ಹಿಂದೆ ರಸ್ತೆ ಕಾಮಗಾರಿ ಸಲುವಾಗಿ ಕುಟುಂಬಸಮೇತರಾಗಿ ಕಾರ್ವಿುಕರು ಮಂಗಳೂರಿಗೆ ಹೋಗಿದ್ದರು. ಏಕಾಏಕಿ ಲಾಕ್​ಡೌನ್ ಆಗುತ್ತಿದ್ದಂತೆ ಗುತ್ತಿಗೆದಾರ ಯಾವುದೇ ವ್ಯವಸ್ಥೆ ಮಾಡದೇ ಕೈಕೊಟ್ಟಿದ್ದ. ಇದರಿಂದಾಗಿ ದಿಕ್ಕೇ ತೋಚದಂತಾದ ಕಾರ್ವಿುಕರು, ಮಹಿಳೆಯರು, ಮಕ್ಕಳ ಸಮೇತರಾಗಿ ನಡೆದುಕೊಂಡೇ ಹುಬ್ಬಳ್ಳಿವರೆಗೆ ಬಂದಿದ್ದಾರೆ. ಇದರಲ್ಲಿ ರಾಜಸ್ತಾನ, ಉತ್ತರ ಪ್ರದೇಶದ ಕೆಲ ಕಾರ್ವಿುಕರೂ ಸೇರಿಕೊಂಡಿದ್ದಾರೆ.

    ಹೊಸ ಬಸ್ ನಿಲ್ದಾಣದಲ್ಲಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದು ಶನಿವಾರ ನಿಲ್ದಾಣಕ್ಕೆ ಆಗಮಿಸಿದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕರನ್ನು ಕೇಳಿದರೆ ಕಿ.ಮೀ. 41ಗೆ ರೂ. ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆ ಪ್ರಕಾರ 2 ಬಸ್​ಗೆ ಒಟ್ಟು 1.20 ಲಕ್ಷ ರೂ. ಬಾಡಿಗೆ ನೀಡಬೇಕಾಗುತ್ತದೆ. ಊಟಕ್ಕೂ ಪರಿತಪಿಸುತ್ತಿರುವ ಕಾರ್ವಿುಕರು ಅಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ತಿಳಿಯದೇ ಚಿಂತೆಗೀಡಾಗಿದ್ದಾರೆ. ಹೇಗಾದರೂ ಮಾಡಿ ಕರ್ನಾಟಕ ಸರ್ಕಾರ ಮತ್ತು ಮಧ್ಯಪ್ರದೇಶ ಸರ್ಕಾರ ನಮ್ಮೂರಿಗೆ ಹೋಗಲು ವ್ಯವಸ್ಥೆ ಮಾಡಿಕೊಡಲಿ ಎಂದು ಮನವಿ ಮಾಡಿದ್ದಾರೆ.

    ಸ್ಥಳೀಯ ಮುಖಂಡ ಮಹೇಂದ್ರ ಸಿಂಘಿ ಮತ್ತಿತರರು ಕಾರ್ವಿುಕರಿಗೆ ತಾತ್ಕಾಲಿಕವಾಗಿ ಊಟ, ವಸತಿ ಸೌಕರ್ಯ ಒದಗಿಸಿದ್ದು, ಕಾರ್ವಿುಕರಿಗೆ ಬಸ್ ಸೌಲಭ್ಯಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts