More

    ಮದ್ಯ ಅಕ್ರಮ ಸಾಗಣೆ ತಡೆದ ಹಾರೋಗೇರಿ ಗ್ರಾಮಸ್ಥರು

    ಮುಂಡರಗಿ: ಬೈಕ್​ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ತಡೆದು ಅಬಕಾರಿ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ ಘಟನೆ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ.

    ಶಂಭುಲಿಂಗಪ್ಪ ಹೋರಿ ಹಾಗೂ ಹೊನ್ನೂರಪ್ಪ ಮಡಿವಾಳರ ಎಂಬುವವರು ಬೈಕ್​ನಲ್ಲಿ ಐದು ಬಾಕ್ಸ್ ಮದ್ಯವನ್ನು ಹಾರೋಗೇರಿ ಗ್ರಾಮಕ್ಕೆ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಅವರನ್ನು ತಡೆದು ಗ್ರಾಪಂ ಕಾರ್ಯಾಲಯದ ಮುಂದೆ ಮದ್ಯದ ಪ್ಯಾಕೆಟ್​ಗಳನ್ನು ಸುರಿಸಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದಾರೆ. ನಂತರ ಸ್ಥಳಕ್ಕೆ ಅಬಕಾರಿ ಉಪ ನಿರೀಕ್ಷಕ ವಿವೇಕಾನಂದ ಮಕಾಳೆ, ಎಎಸ್​ಐ ಈಶ್ವರಪ್ಪ ಕೆರಿಮನಿ ಮತ್ತು ಸಿಬ್ಬಂದಿ ಆಗಮಿಸಿದರು. ಇದೇ ವೇಳೆ ಗ್ರಾಮದ ಡಬ್ಬಾ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 6 ಜನರನ್ನು ಅಬಕಾರಿ ಅಧಿಕಾರಿಗಳು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ದಂಡದ ಪ್ರಕರಣವನ್ನು ದಾಖಲಿಸಿ ಬಿಟ್ಟು ಕಳುಹಿಸಿದ್ದಾರೆ.

    ಶಂಭುಲಿಂಗಪ್ಪ ಮತ್ತು ಹೊನ್ನೂರಪ್ಪ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಬೈಕ್ ಮತ್ತು ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕ ಎಸ್. ದೀಪಕ್ ತಿಳಿಸಿದರು. ಈ ಕುರಿತು ಮುಂಡರಗಿ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts