More

    ಮದ್ಯದಂಗಡಿ ಸ್ಥಗಿತಗೊಳಿಸಲು ಒತ್ತಾಯ

    ಸಂಶಿ: ಗ್ರಾಮದಲ್ಲಿ ಪುನರಾರಂಭಗೊಂಡ ಮದ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಗ್ರಾಪಂ, ಬೆಳೆ ರಕ್ಷಕ ರೈತ ಸಂಘದ ಸದಸ್ಯರ ನಿಯೋಗ ಬುಧವಾರ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

    ಕರೊನಾ ಲಾಕ್​ಡೌನ್​ನಿಂದ ಒಂದೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ಮದ್ಯದಂಗಡಿಗಳು ಮೇ 4ರಿಂದ ಪುನರಾರಂಭಗೊಂಡಿದ್ದರಿಂದ ಮತ್ತೆ ಕೌಟುಂಬಿಕ ನೆಮ್ಮದಿ ಕಸಿಯುತ್ತಿವೆ ಎಂದು ಗ್ರಾಮದ ನೊಂದ ಮಹಿಳೆಯರು ಗ್ರಾಪಂ ಮುಂದೆ ಪ್ರತಿಭಟಿಸಿ ಅಲವತ್ತುಕೊಂಡಿದ್ದರು. ಮಹಿಳೆಯರ ಅಹವಾಲು ಸ್ವೀಕರಿಸಿದ್ದ ಗ್ರಾಪಂ, ರೈತ ಸಂಘ ಸದಸ್ಯ ಮಂಡಳಿ ಮದ್ಯದಂಗಡಿ ತೆರೆದಿದ್ದರಿಂದ ಗ್ರಾಮದಲ್ಲಿ ನಡೆದ ಕೌಟುಂಬಿಕ ಕಲಹಗಳ ಕುರಿತಾಗಿ ಅಧಿಕಾರಿಗಳಲ್ಲಿ ಮನವರಿಕೆ ಮಾಡಿ ಮದ್ಯದಂಗಡಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

    ರೈತ ಸಂಘದ ಅಧ್ಯಕ್ಷ ಪರಮೇಶಪ್ಪ ನಾಯ್ಕರ, ಗ್ರಾಪಂ ಅಧ್ಯಕ್ಷ ಶೇಖರಪ್ಪ ಹರಕುಣಿ ಮಾತನಾಡಿ, ಮದ್ಯದ ಅಂಗಡಿಗಳ ಪುನರಾರಂಭದಿಂದ ಕುಟುಂಬಗಳಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ. ಮಹಿಳೆಯರ ಹಿತದೃಷ್ಟಿಯಿಂದ ಅವುಗಳನ್ನು ಕೂಡಲೆ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ನಿಮ್ಮ ಮನವಿ ಪರಿಶೀಲಿಸಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗá-ವುದು ಎಂದು ಭರವಸೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಯಲ್ಲಪ್ಪಗೌಡ ಪಾಟೀಲ, ಬಸವರಾಜ ಗುಡಗೇರಿ, ರೈತ ಸಂಘದ ಉಪಾಧ್ಯಕ್ಷ ಗುರುಪಾದಪ್ಪ ಬಂಕದ, ಡಿ.ಬಿ. ಪಾಟೀಲ, ಗ್ರಾಪಂ ಸದಸ್ಯರಾದ ಪ್ರಕಾಶಗೌಡ ಪಾಟೀಲ, ಮುದಕಣ್ಣ ಅಗಡಿ, ಬಸವರಾಜ ಚವಣ್ಣವರ, ಫಕೀರಗೌಡ ಬಳಗಾನೂರ, ಶಂಕ್ರಪ್ಪ ಮಡ್ಲಿ, ನೂರ್​ಅಹ್ಮದ್ ಮುನವಳ್ಳಿ, ಬಸವರಾಜ ರಡ್ಡೇರ, ಶರೀಫ ಮುಡ್ಸಿಬಣ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts