More

    ಮದಕರಿನಾಯಕ, ಓಬವ್ವ ಪ್ರಶಸ್ತಿ ಪ್ರದಾನ

    ಚಿತ್ರದುರ್ಗ: ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕರುನಾಡ ವಿಜಯಸೇನೆಯಿಂದ ಭಾನುವಾರ ಸಾಂಸ್ಕೃತಿಕ ಮೆರಗಿನೊಂದಿಗೆ ಕನ್ನಡ ಹಬ್ಬ ಆಚರಿಸಲಾಯಿತು.

    ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲಕ್ಕಿ ಡಿಪ್‌ನಲ್ಲಿ ವಿಜೇತರಾದ ಐವರು ನಾರಿಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

    ಜನಪದ ಗಾಯಕ ಡಾ.ಎಂ.ಮಹದೇವಸ್ವಾಮಿ ಮಳವಳ್ಳಿ ಅವರಿಗೆ ರಾಜಾವೀರ ಮದಕರಿನಾಯಕ, ಲೇಖಕಿ ಬಾ.ಹ.ರಮಾಕುಮಾರಿ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಮರಣಿಕೆ, ತಲಾ 20 ಸಾವಿರ ರೂ. ನಗದು ನೀಡಲಾಯಿತು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಕೋಟೆನಾಡಿನ ರಾಜಕೀಯ ಸುಪುತ್ರ, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಅವರಿಗೆ ಕೋಟೆನಾಡಿನ ಶಿಕ್ಷಣ ಕ್ರಾಂತಿಕಾರಿ ಬಿರುದು ನೀಡಿ ಸನ್ಮಾನಿಸಲಾಯಿತು.

    ಚರ್ಮಗಾರಿಕೆ-ರಾಜಣ್ಣ, ಕ್ಷೌರಿಕ ಕಾಯಕ-ಎನ್.ಶ್ರೀನಿವಾಸ್, ಶವ ಪರೀಕ್ಷೆ ಸಹಾಯಕ ಹೊಸದುರ್ಗದ ಕೃಷ್ಣಮೂರ್ತಿ, ಇಸ್ತ್ರಿ ಕೆಲಸಗಾರ ಜಗದೀಶ್, ಪೌರಕಾರ್ಮಿಕ ನಿಂಗರಾಜ್, ಅನಾಥ ಶವಗಳ ಸಂಸ್ಕಾರ ಕಾರ್ಯ ನಡೆಸುವ ಅಶೋಕ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.

    ಗಿಚ್ಚಿ ಗಿಲಿಗಿಲಿ ಜಗ್ಗಪ್ಪ, ಹಿನ್ನಲೆ ಗಾಯಕಿ ದಿವ್ಯಾ ರಾಮಚಂದ್ರ, ಸರಿಗಮಪ ಗಾಯಕರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.

    ಕರುನಾಡ ವಿಜಯಸೇನೆ ಅಧ್ಯಕ್ಷ ಎಚ್.ಎನ್.ದೀಪಕ್, ಉಪಾಧ್ಯಕ್ಷ ಸಚ್ಚಿದಾನಂದ್, ಮಹೇಶ್, ಶಿವಪುತ್ರ ಗಾಣದಾಳ್, ನೆ.ಲ.ರಾಮ್‌ಪ್ರಸಾದ್‌ಗೌಡ, ಕೆ.ಟಿ.ಶಿವಕುಮಾರ್, ವೀಣಾಗೌರಣ್ಣ, ರತ್ನಮ್ಮ, ಗೋಪಿನಾಥ್, ಅಣ್ಣಪ್ಪ, ನಿಸಾರ್ ಅಹಮದ್, ರತ್ನಮ್ಮ, ಪ್ರದೀಪ್, ಜಗದೀಶ್ ಪಿ.ಸುರೇಶ್, ಅಖಿಲೇಶ್, ಮಣಿಕಂಠ, ಹರೀಶ್‌ಕುಮಾರ್, ಸಂತೋಷ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts