More

    ಮತ ಮಾರಾಟವಾದಲ್ಲಿ ಪ್ರಜಾಪ್ರಭುತ್ವ ನಾಶ

    ಚಿತ್ರದುರ್ಗ: ಚುನಾವಣೆಗಳಲ್ಲಿ ಮೌಲ್ಯಯುತವಾದ ಮತವನ್ನು ಯೋಗ್ಯರ ಆಯ್ಕೆಗೆ ಬಳಸುವ ಬದಲು ಮಾರಾಟವಾದಲ್ಲಿ ಪ್ರಜಾಪ್ರಭುತ್ವ ನಾಶವಾಗಲಿದೆ ಎಂದು ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಹೇಳಿದರು.

    ಪತ್ರಿಕಾ ಭವನದಲ್ಲಿ ಭಾನುವಾರ ಜಿಲ್ಲಾ ಮಾದಿಗ ಯುವ ಸೇನೆ, ಕಣಿವೆಮಾರಮ್ಮ ಸಂಘ, ಸ್ಲಂ ಜನಾಂದೋಲನ ಕರ್ನಾಟಕದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಡಾ.ಬಾಬು ಜಗಜೀವನರಾಂ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.

    ಉದ್ಯಮಿಗಳು ಚುನಾವಣೆಗೆ ನಿಂತು ಗೆಲ್ಲುತ್ತಾರೆಂದರೆ ವಿಧಾನಸಭೆಯಲ್ಲಿ ಬಡವರ ಅಭ್ಯುದಯದ ಕುರಿತು ಧ್ವನಿ ಎತ್ತ್ತುವವರ‌್ಯಾರು? ಶೇ 96 ಭಾಗ ಕೋಟ್ಯಾಧಿಪತಿಗಳೆ ಚುನಾವಣೆಯಲ್ಲಿ ಜಯಗಳಿಸುತ್ತಿದ್ದಾರೆ ಎಂದು ವಿಷಾದಿಸಿದರು.

    ಕಟ್ಟಕಡೆಯ ಮನುಷ್ಯನಿಗೆ ಮೂಲಸೌಕರ್ಯ ಕಲ್ಪಿಸುವ ಬದಲು ಕಾಂಗ್ರೆಸ್‌ನವರು ಚುನಾವಣಾ ಪೂರ್ವದಲ್ಲಿಯೇ 5
    ಗ್ಯಾರೆಂಟಿ ಘೋಷಿಸಿದ್ದರಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಬಿಜೆಪಿಯಂತೆ ಇದು ಕೂಡ ಒಂದು ರೀತಿಯ ನಯವಂಚಕತನ ಎನ್ನುವು ದರಲ್ಲಿ ಅನುಮಾನವಿಲ್ಲ. ಈಗಲಾದರೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಎಚ್ಚೆತ್ತುಕೊಂಡು ರಾಜಕೀಯವಾಗಿ ಬೆಳೆಯಬೇಕಿದೆ ಎಂದು ಸಲಹೆ ನೀಡಿದರು.

    ಅಂಬೇಡ್ಕರ್ ಅವರ ಆಶಯಗಳೊಂದಿಗೆ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿದಾಗ ಮಾತ್ರ ಸಮಾಜಮುಖಿಯಾಗಿ ಹೊರಹೊಮ್ಮಬಹುದು. ಮೌಲ್ಯಯುತ ಬದುಕಿಗಿಂತ ಯಾವುದೂ ದೊಡ್ಡದಲ್ಲ ಎಂದರು.

    ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಅವೆಲ್ಲವನ್ನು ಬಳಸಿಕೊಂಡು ಶಿಕ್ಷಣವಂತರಾಗಿ ಉನ್ನತ ಸ್ಥಾನ ಪಡೆಯಿರಿ. ಕೊಳೆಗೇರಿ ಸೇರಿ ಇತರೆಡೆ ವಾಸಿಸುತ್ತಿರುವ ಬಡವರಿಗೆ ನೆರವಾಗಿ ಎಂದು ಮನವಿ ಮಾಡಿದರು.

    ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಸ್ವಾಮಿ, ಉಪನ್ಯಾಸಕ ಪ್ರೊ.ಎಲ್.ನಾಗರಾಜಪ್ಪ, ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಲ್.ಮಲ್ಲಣ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ದಲಿತ ಮುಖಂಡರಾದ ನಾಗರಾಜ್, ಎನ್.ಶಿವಕುಮಾರ್, ಸಿ.ಎ.ತಿಪ್ಪೇಸ್ವಾಮಿ, ನೇಹ ಮಲ್ಲೇಶ್, ಮಹಲಿಂಗಪ್ಪ, ಸುರೇಶ್, ಜೆ.ಪ್ರಸನ್ನಕುಮಾರ್, ಬಿ.ಟಿ.ಸಂಪತ್‌ಕುಮಾರ್, ಎಂ.ವೆಂಕಟೇಶ್, ಓ.ಸೋಮಣ್ಣ, ನಾಗೇಂದ್ರಬಾಬು, ಪಿ.ದೇವರಾಜ್, ಪ್ರಕಾಶ್, ಮಲ್ಲಿಕಾರ್ಜುನ, ಮಹೇಶ, ಜಿ.ಚೌಡಪ್ಪ, ಹನುಮಂತಪ್ಪ, ಹೊನ್ನೂರಪ್ಪ, ಪುರುಷೋತ್ತಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts