More

    ಮತ್ತೊಮ್ಮೆ ಶಾಸಕ ಶ್ರೀಮಂತ ಪಾಟೀಲ ಗೆಲುವು ಖಚಿತ

    ಸಂಬರಗಿ/ಅನಂತಪುರ: ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

    ಅನಂತಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರನ್ನು ಭಾನುವಾರ ಬಿಜೆಪಿಗೆ ಸ್ವಾಗತಿಸಿ ಮಾತನಾಡಿದ ಅವರು, ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ 25 ಸಾವಿರ ಮತಗಳಿಂದ ಗೆಲುವು ದಾಖಲಿಸುವುದು ಖಚಿತ ಎಂದರು.

    ನಮ್ಮ ಪಕ್ಷದಿಂದ ಶನಿಕಾಟ ಹೋಗಿರುವುದು ಪಕ್ಷಕ್ಕೆ ಅನುಕೂಲವಾಗಿದೆ. ರಾಜಕೀಯ ಕುತಂತ್ರದಿಂದ ಬಸವೇಶ್ವರ ಏತ ನೀರಾವರಿ ಯೋಜನೆ ಕುಂಠಿತಗೊಂಡಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.

    ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ನೀರಾವರಿ ಮಂತ್ರಿಯಾಗಿ ಮುಂದುವರಿದಿದ್ದರೆ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡು ರೈತರು ಅದರಿಂದ ಒಂದು ಬೆಳೆಯನ್ನು ತೆಗೆಯುತ್ತಿದ್ದರು. ಕೆಲ ಜನರು ನೀರಾವರಿ ಯೋಜನೆಗೆ ಅಡೆತಡೆಗಳನ್ನು ಮಾಡಿದರು. ಆದರೂ ಕೈಯಿಂದ 6 ಕೋಟಿ ರೂ. ನೀಡುವ ಮೂಲಕ ಯೋಜನೆ ಪೂರ್ಣಗೊಳಿಸಲು ಶ್ರಮಿಸಿದೆ ಎಂದರು.

    ಬಿಜೆಪಿ ಮುಖಂಡ ದಾದಾ ಶಿಂಧೆ ಮಾತನಾಡಿ, ಅನಂತಪುರದಲ್ಲಿ ಶಾಸಕ ಶ್ರೀಮಂತ ಪಾಟೀಲ 28.69 ಕೋಟಿ ರೂ. ಅನುದಾನ ನೀಡುವ ಮೂಲಕ ಗ್ರಾಮವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದರು.

    ಮುಖಂಡರಾದ ಸುಶಾಂತ ಪಾಟೀಲ, ಕೆಎಂಎ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ, ತಮ್ಮಣ್ಣ ಪಾರಶೆಟ್ಟಿ, ಕುಮಾರ ಹಬುಗುಂಡೆ, ನಾನಾಸಾಹೇಬ ಅವತಾಡೆ, ಗಿರೀಶ ಬುಟಾಳಿ, ರವಿ ಪೂಜಾರಿ, ಬಾಹುಸಾಹೇಬ ಜಾಧವ, ಭೀಮು ದೇಶಿಂಗೆ, ಪಾಂಡುರಾವ ಹಬುಗುಂಡೆ, ಮಲ್ಲೇಶ ಮೇತ್ರಿ, ಶೇಖರ ತೇಲಿ, ರೇವಣಸಿದ್ದಪ್ಪ ನಕಾತೆ, ವಿಶ್ವನಾಥ ಹೀರೆಮಠ, ಈಶ್ವರ ಕುಂಬಾರೆ, ಪ್ರಕಾಶ ಪಾಟೀಲ, ಪ್ರವೀಣ ಮೇತ್ರಿ, ಆರ್.ಎಂ.ಪಾಟೀಲ ಇತರರಿದ್ದರು.

    ಗಡಿಭಾಗದ ಏಳಿಗೆಗೆ ಶ್ರಮ

    ಸಂಬರಗಿ: ಗಡಿಭಾಗದ ಅಭಿವೃದ್ಧಿಗೆ ಶಾಸಕ ಶ್ರೀಮಂತ ಪಾಟೀಲ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಸುಧಾಕರ ಭಗತ ಹೇಳಿದರು. ಸಮೀಪದ ಲೋಕೂರ ಗ್ರಾಮದಲ್ಲಿ ಸೋಮವಾರ ಗ್ರಾಮದೇವತೆಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಕ್ಕೆ 20 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ನೀಡಿರುವ ಶಾಸಕ ಶ್ರೀಮಂತ ಪಾಟೀಲ ಗೆಲುವು ಖಚಿತ ಎಂದರು.

    ಮುಖಂಡರಾದ ಬಾಳಾಸಾಹೇಬ ಮಾಲಗಾಂವೆ, ದತ್ತಾ ಭಗತ, ಅಮೃತ ಜಾಧವ, ಬಬನ ಕ್ಷೀರಸಾಗರ, ಗೋಪಾಲ ಜಗದಾಳೆ, ಧರೆಪ್ಪ ಕುಂಬಾರ, ಸಚಿನ ರಾಜಮಾನೆ, ಶಿವಾ ಮಂಗಸೂಳಿ, ಜಾಲಿಂದ್ರ ಭಗತ, ಸುನೀಲ ಚವ್ಹಾಣ, ಪಿಂಟು ಕಾಂಬಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts