More

    ಮತ್ತೆ 82 ಮಂದಿಗೆ ಸೋಂಕು

    ಬೀದರ್: ನಗರ ಸೇರಿ ಜಿಲ್ಲಾದ್ಯಂತ ಕರೊನಾ ಸೋಂಕಿನ ಎರಡನೇ ಅಲೆ ಆರ್ಭಟ ಮುಂದುವರೆದಿದೆ. ಮಂಗಳವಾರ ಅತ್ಯಧಿಕ 82 ಪಾಸಿಟಿವ್ ಪ್ರಕರಣ ಬಂದಿವೆ. ಸೋಮವಾರ 74 ಕೇಸ್ ಬಂದಿದ್ದವು. ದಿನೇ ದಿನೆ ಸೋಂಕು ಗಣನೀಯವಾಗಿ ವ್ಯಾಪಿಸಿಕೊಳ್ಳುತ್ತಿರುವುದು ಗಡಿ ಜಿಲ್ಲೆ ಜನರ ತಲ್ಲಣಕ್ಕೆ ಕಾರಣವಾಗಿದೆ.

    ಕಳೆದ ಎರಡು ವಾರಗಳಿಂದ ನಿರಂತರ ಪಾಸಿಟಿವ್ ಪ್ರಕರಣ ಹೆಚ್ಚುತ್ತಿವೆ. ಅದರ ಜತೆಯಲ್ಲಿ ಸಾವಿನ ಸಂಖ್ಯೆ ಸಹ ಕ್ರಮೇಣ ಏರುತ್ತಿದೆ. ಸೋಮವಾರ 74 ಪಾಸಿಟವ್ ಕೇಸ್ ಬಂದು ಆರು ತಿಂಗಳಲ್ಲೇ ಅತ್ಯಧಿಕ ದಾಖಲೆ ನಿರ್ಮಿಸಿತ್ತು. ಮಂಗಳವಾರ ಇದಕ್ಕೆ ಮತ್ತೆ 82 ದಾಖಲೆ ಪ್ರಕರಣ ಸೇರಿವೆ. ಎರಡೇ ದಿನದಲ್ಲಿ 156 ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.

    ಬೀದರ್ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪಟ್ಟಣ, ಗ್ರಾಮೀಣ ಭಾಗದಲ್ಲಿಯೂ ಕರೊನಾ ಸೋಂಕು ವ್ಯಾಪಕ ಹರಡುತ್ತಿದೆ. ಕಳೆದ ಒಂದು ವಾರದಲ್ಲಿ ನಿತ್ಯವೂ ಸರಾಸರಿ 55ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿವೆ. ಹಿಂದಿನ 10 ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 400ರ ಗಡಿ ದಾಟಿದೆ. ಇಲ್ಲಿಯ ಜಿಲ್ಲಾ ಆಸ್ಪತ್ರೆ ಹಳೇ ಕಟ್ಟಡದಲ್ಲಿರುವ 300 ಹಾಸಿಗೆಯ ಕೋವಿಡ್ ಕೇಂದ್ರ ಇದೀಗ ಸಂಪೂರ್ಣ ಭರ್ತಿಯಾಗಿದೆ.

    ಜಿಲ್ಲಾ ನ್ಯಾಯಾಲಯಕ್ಕೆ ಸುತ್ತಿಕೊಂಡಿದ್ದ ಕರೊನಾ ಕಂಟಕ ಕ್ರಮೇಣ ದೂರವಾಗುತ್ತಿರುವುದು ಸಮಾಧಾನ ತಂದಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶ ಕಾಡಲೂರು ಸತ್ಯನಾರಾಯಣಾಚಾರ್ಯ ಅವರು ಸೋಂಕು ಮುಕ್ತವಾಗಿದ್ದು, ಅವರ ವರದಿ ಮಂಗಳವಾರ ನೆಗೆಟಿವ್ ಬಂದಿದೆ. ವಾರದ ಹಿಂದೆ ಇವರಿಗೆ ಪಾಸಿಟಿವ್ ಬಂದಿತ್ತು. ವಕೀಲರು ಸೇರಿ 13ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಸಿಟಿವ್ ಬಂದ ಕಾರಣ ಕಳೆದ ಒಂದು ವಾರದಿಂದ ಜಿಲ್ಲಾ ಕೋಟ್೯ ಸಂಕೀರ್ಣ ಸೀಲ್ಡೌನ್ ಮಾಡಲಾಗಿದೆ. ಪಾಸಿಟಿವ್ ಬಂದಿದ್ದ ಹಲವರ ವರದಿ ಈಗ ನೆಗೆಟಿವ್ ಬಂದಿವೆ. ಬುಧವಾರದಿಂದ ಕೋಟ್೯ ಕಲಾಪ ಶುರುವಾಗುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts