More

    ಮತ್ತೆ 15 ಕರೊನಾ ಶಂಕಿತರ ಪತ್ತೆ

    ನವಲಗುಂದ: ದೆಹಲಿ ನಿಜಾಮá-ದ್ದೀನ್ ಮರ್ಕಜ್ ತಬ್ಲಿ ಜಮಾತ್​ನ ಸಾಮೂಹಿಕ ಪ್ರಾರ್ಥನಾ ಸಭೆಗೆ ತೆರಳಿದವರ ಪೈಕಿ ಪಟ್ಟಣದಲ್ಲಿ 15 ಶಂಕಿತರು ಪತ್ತೆಯಾಗಿದ್ದಾರೆ. ಅವರನ್ನು ತಹಸೀಲ್ದಾರ್ ನವೀನ ಹುಲ್ಲೂರ, ಪೊಲೀಸ್ ಇಲಾಖೆ ಅಧಿಕಾರಿಗಳು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ಕಳá-ಹಿಸಿದ್ದಾರೆ. ಪಟ್ಟಣದಲ್ಲಿ ಪತ್ತೆಯಾದ ಕರೊನಾ ಶಂಕಿತರು ಗಾಂಧಿ ಮಾರ್ಕೆಟ್, ಕಳ್ಳಿಮಠ ಓಣಿ, ಗುಡ್ಡಕೇರಿ ಓಣಿ, ಬಸವೇಶ್ವರ ನಗರದವರು. ದೆಹಲಿ ಸಭೆಗೆ ತೆರಳಿದ್ದ ಪಟ್ಟಣದ ಒಂದು ಸಮುದಾಯದ 11 ಜನರ ತಂಡ ಮಾ. 13ರಂದು ನವಲಗುಂದಕ್ಕೆ ಆಗಮಿಸಿತು. ಆಗ ಅವರನ್ನು ಕರೊನಾ ಶಂಕಿತರು ಎಂದು ಪರಿಗಣಿಸಿ ತಪಾಸಣೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ಕಳá-ಹಿಸಲಾಗಿತ್ತು. ತದನಂತರ ಇದೇ ಸಮá-ದಾಯದ 15 ಜನರ ಇನ್ನೊಂದು ತಂಡ ದೆಹಲಿಗೆ ತೆರಳಿದ್ದರೂ ತಲೆಮರೆಸಿಕೊಂಡಿತ್ತು. ಈ ತಂಡವನ್ನು ಪತ್ತೆ ಮಾಡಿದ ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ವಿ.ಬಿ. ಮಠಪತಿ ಸೇರಿ ತಾಲೂಕಾಡಳಿತವು ಎರಡು ತಂಡದ ರೂವಾರಿಗಳಾದ ಮೌಲಾಲಿ ಮತ್ತು ಬೇಪಾರಿ ಅವರಿಂದ ಸತ್ಯಾಂಶ ಹೊರಗೆಡವಿದೆ. ಪೊಲೀಸರು ಪಟ್ಟಣದಲ್ಲಿ ಮೊದಲು 11 ಈಗ 15 ಸೇರಿ 26 ಕರೊನಾ ಶಂಕಿತರನ್ನು ತಪಾಸಣೆಗೆ ಹುಬ್ಬಳ್ಳಿ ಕಿಮ್ಸ್​ಗೆ ಕಳá-ಹಿಸಿದ್ದಾರೆ. ಶಂಕಿತರ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ಶಂಕಿತರ ಕá-ಟುಂಬಸ್ಥರು ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಕೆ ನೀಡಿರುವ ಪೊಲೀಸರು ಪಟ್ಟಣದಲ್ಲಿ ಬಂದೋಬಸ್ತ್ ಅನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಕರೊನಾ ಶಂಕಿತರು ದೆಹಲಿ ಸಭೆಗೆ ತೆರಳಿ ಪಟ್ಟಣಕ್ಕೆ ವಾಪಸ್ಸಾಗಿದ್ದನ್ನು ಹೇಳಿಕೊಳ್ಳದೇ ಪಟ್ಟಣದಲ್ಲಿ ಓಡಾಡಿಕೊಂಡಿದ್ದರು. ಈಗ ಇವರೆಲ್ಲ ಪತ್ತೆಯಾಗಿದ್ದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts