More

    ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಸಾರ್ವಜನಿಕರು

    ಹುಬ್ಬಳ್ಳಿ: ಜಿಲ್ಲಾಡಳಿತ ಲಾಕ್​ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಸೋಮವಾರ ನಗರದ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದರು.

    ಭಾನುವಾರದ ವರೆಗೆ ಬೆಳಗ್ಗೆ 6ರಿಂದ 8 ಗಂಟೆವರೆಗೆ ಮಾತ್ರ ಹಣ್ಣು, ತರಕಾರಿ ಖರೀದಿಗೆ ಮಾತ್ರ ಅವಕಾಶವಿತ್ತು. ದಿನಸಿ ಅಂಗಡಿಗಳಿಗೆ ಅನುಮತಿ ಇರಲಿಲ್ಲ. ಸೋಮವಾರದಿಂದ ಬೆಳಗ್ಗೆ 6ರಿಂದ 10ರವರೆಗೆ ದಿನಸಿ, ಹಣ್ಣು, ತರಕಾರಿ ಖರೀದಿಗೆ ಅವಕಾಶ ನೀಡಲಾಗಿದೆ. ಹಾಗಾಗಿ, ಮಾರುಕಟ್ಟೆಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದು ಕಂಡು ಬಂತು. ದಿನಸಿ ಅಂಗಡಿಗಳ ಮುಂದೆ ಗ್ರಾಹಕರ ದಂಡೇ ನೆರೆದಿತ್ತು.

    ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ದುರ್ಗದ ಬೈಲ್, ಹಳೇ ಹುಬ್ಬಳ್ಳಿ, ಕೇಶ್ವಾಪುರ, ಗೋಕುಲ ರಸ್ತೆ, ಎಪಿಎಂಸಿ, ನವನಗರ ಸೇರಿ ನಗರದೆಲ್ಲೆಡೆ ಜನ, ವಾಹನ ಸಂಚಾರ ಹೆಚ್ಚಾಗಿತ್ತು. ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ಆಯಾ ಠಾಣೆಗಳ ಇನ್​ಸ್ಪೆಕ್ಟರ್, ಸಿಬ್ಬಂದಿ ದಿನಸಿ ಅಂಗಡಿ, ತರಕಾರಿ ಅಂಗಡಿ ಬಂದ್ ಮಾಡಿಸಿದರು. ಸಾರ್ವಜನಿಕರು ಮನೆಗೆ ತೆರಳುವಂತೆ ಧ್ವನಿವರ್ದಕದ ಮೂಲಕ ಮನವಿ ಮಾಡಿದರು. ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ಜಪ್ತಿ ಮಾಡಿದರು.

    ಅಂಚೆ ಕಚೇರಿ ಎದುರು ನೂಕುನುಗ್ಗಲು: ವಿವಿಧ ಪಿಂಚಣಿ ಹಣ ಬಿಡಿಸಿಕೊಳ್ಳಲೆಂದು ಹಳೇ ಹುಬ್ಬಳ್ಳಿ ಅಂಚೆ ಕಚೇರಿ ಎದುರು ಸೋಮವಾರ ನೂರಾರು ಜನ ಸೇರಿದ್ದರು. ಹಣ ಬಿಡಿಸಿಕೊಳ್ಳಲು ಏಕಾಏಕಿ ನೂರಾರು ಜನ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟರು. ನಗರದ ವಿವಿಧ ಅಂಚೆ ಕಚೇರಿಗಳ ಬಳಿಯೂ ಜನದಟ್ಟಣೆ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts