More

    ಮತ್ತೆ ಗೆದ್ದ ಅನಿಲ್ ಚಿಕ್ಕಮಾದುಗೆ ಭರ್ಜರಿ ಸ್ವಾಗತ

    ಎಚ್.ಡಿ.ಕೋಟೆ: ಹೆಗ್ಗಡದೇವನಕೋಟೆ ಕ್ಷೇತ್ರದಿಂದ ಎರಡನೇ ಬಾರಿ 35 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಅನಿಲ್ ಚಿಕ್ಕಮಾದು ತಾಲೂಕಿನಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.


    ಫಲಿತಾಂಶ ಹೊರ ಬೀಳುತ್ತಿದ್ದಂತೆ ಮತ ಕೇಂದ್ರದಿಂದ ನೇರವಾಗಿ ಮೈಸೂರು ನಗರದಿಂದ ಆಗಮಿಸಿದ ಅನಿಲ್ ಚಿಕ್ಕಮಾದು ಅವರನ್ನು ತಾಲೂಕಿನ ಎಚ್.ಡಿ.ಕೋಟೆಯ ಗಡಿ ಭಾಗದ ಕಂಚಮಳ್ಳಿ ಗೇಟ್ ಬಳಿ ಸೇರಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಅವರಿಗೆ ಭಾರಿ ಗಾತ್ರದ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಜಯಘೋಷ ಮೊಳಗಿಸುವ ಮೂಲಕ ಅದ್ದೂರಿ ಸ್ವಾಗತ ನೀಡಿದರು.


    ಹಂಪಾಪುರ, ಹೊಮ್ಮರಗಳ್ಳಿ, ಕೋಳಗಾಲ, ಮಾದಾಪುರ, ಹೈರಿಗೆ, ಮಟಕೆರೆ, ಬೊಪ್ಪನಹಳ್ಳಿ, ಹ್ಯಾಂಡ್‌ಪೋಸ್ಟ್, ಕೃಷ್ಣಾಪುರ, ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಲ್ಲಿ ದಾರಿ ಉದ್ದಕ್ಕೂ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಅಭಿನಂದಿಸಿದರು.


    ಕೋಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 22,000 ಬಹುಮತ ಗಳಿಸುವುದರ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು, ಈ ಬಾರಿ ಮತ್ತೊಮ್ಮೆ 35,000 ಅಧಿಕ ಮತಗಳಿಂದ ಜಯಗಳಿಸಿ ತಾಲೂಕಿನಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗುವ ಮೂಲಕ 45 ವರ್ಷಗಳ ಇತಿಹಾಸ ಮತ್ತೆ ಮರುಕಳಿಸುವಂತೆ ಮಾಡಿದ್ದಾರೆ.

    ಪಿರಣ್ಣ ದಾಖಲೆ ಸರಿಗಟ್ಟಿದ ಅನಿಲ್
    ಆರ್. ಪಿರಣ್ಣ ಅವರು ಕ್ಷೇತ್ರದಲ್ಲಿ 1962ರಲ್ಲಿ, ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ 14788 ಮತಗಳ ಪಡೆದು ಶಾಸಕರಾಗಿದ್ದರು. 1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 18818 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಸ್ವತಂತ್ರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, 21859 ಮತಗಳನ್ನು ಪಡೆದು, ಸತತವಾಗಿ ವಿವಿಧ ಪಕ್ಷಗಳ ವಿವಿಧ ಚಿಹ್ನೆಗಳ ಮೂಲಕ ಮೂರು ಬಾರಿ ಶಾಸಕರಾಗಿ ಇತಿಹಾಸ ಬರೆದಿದ್ದರು.


    ನಂತರ ಯಾವುದೇ ಅಭ್ಯರ್ಥಿಗಳು ಸತತವಾಗಿ ಗೆಲುವು ಕಂಡಿರಲಿಲ್ಲ. ಆದರೆ ಈ ಬಾರಿ ಶಾಸಕ ಅನಿಲ್ ಚಿಕ್ಕಮಾದು ಎರಡನೇ ಬಾರಿ ಬಹುಮತದಿಂದ ಆಯ್ಕೆಯಾಗಿರುವುದು ತಾಲೂಕಿನಲ್ಲಿ ಇತಿಹಾಸ ದಾಖಲೆ ಮಾಡಿರುವುದು ಕಂಡುಬಂದಿದೆ. ಶಾಸಕ ಅನಿಲ್ ಚಿಕ್ಕಮಾದು ಕಳೆದ 5 ವರ್ಷಗಳಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆಗಳು, ಅನಿಲ್ ಚಿಕ್ಕಮಾದು ಮತ್ತೊಮ್ಮೆ ಆಯ್ಕೆಯಾಗಲು ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts