More

    ಮತ್ತಿಬ್ಬರು ಗಾಂಜಾ ಮಾರಾಟಗಾರರ ಬಂಧನ

    ಹುಬ್ಬಳ್ಳಿ: ವಾಣಿಜ್ಯ ನಗರಿ ಪೊಲೀಸರು ಗಾಂಜಾ ಬೇಟೆ ಮುಂದುವರಿಸಿದ್ದು, ಶಹರ ಠಾಣೆ ಪೊಲೀಸರು ಭಾನುವಾರ ರಾಜಸ್ಥಾನ ಮೂಲದ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಅವರಿಂದ 1.20 ಲಕ್ಷ ರೂ. ಮೌಲ್ಯದ 6 ಕೆ.ಜಿ. ಗಾಂಜಾ, 1 ಬೈಕ್ ವಶಪಡಿಸಿಕೊಂಡಿದ್ದಾರೆ.

    ರಾಜಸ್ಥಾನ ಮೂಲದ, ಸದ್ಯ ಘಂಟಿಕೇರಿ ಸಿಂಧಗಿ ಕಾಂಪ್ಲೆಕ್ಸ್​ನಲ್ಲಿ ವಾಸವಿರುವ ಸುಮೇರಸಿಂಗ ಮದನಸಿಂಗ್ ರಜಪೂತ (21) ಹಾಗೂ ಕೇಶ್ವಾಪುರ ಆಜಾದ ಕಾಲನಿ ನಿವಾಸಿ ಸಮುಂದರಸಿಂಗ ನೇಪಾಲಸಿಂಗ್ ರಜಪೂತ (21) ಬಂಧಿತರು.

    ಶನಿವಾರ ಮಧ್ಯಾಹ್ನ ಕೇಶ್ವಾಪುರದಿಂದ ಬುದ್ಧವಿಹಾರ ಮಾರ್ಗವಾಗಿ ಘಂಟಿಕೇರಿ ಕಡೆಗೆ ಬೈಕ್ ಮೇಲೆ ಗಾಂಜಾ ಸಾಗಿಸುತ್ತಿದ್ದರು. ಆ ಕುರಿತು ಖಚಿತ ಮಾಹಿತಿ ಮೇರೆಗೆ ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಗಳನ್ನು ವಶಪಡಿಸಿಕೊಂಡಿತ್ತು. ಪಿಎಎಸ್​ಐ ಬಿ.ಎನ್. ಸಾತನ್ನವರ, ಸಿಬ್ಬಂದಿ ವೈ.ಬಿ. ಮೊರಬ, ಎಸ್.ಎ. ಕಲಘಟಗಿ, ಸಿ.ಎಸ್. ಚಲವಾದಿ, ಪಿ.ಎಲ್. ಗೋವಿಂದಪ್ಪನವರ, ಎಸ್.ಬಿ. ಕಟ್ಟಿಮನಿ, ಎಚ್.ಬಿ. ನಂದೇರ, ಕೆ.ಎಚ್. ರಗಣಿ, ಕೆ.ಯು. ತುಂಬಿನವರ, ಕೋಟೇಶ ಕೆ.ಎಚ್. ತಂಡದಲ್ಲಿದ್ದರು.
    ಗಾಂಜಾ ಮಾರಾಟ ಪ್ರವೃತ್ತಿ!
    ಇಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಸಮುಂದರ ಸಿಂಗ್ ಮತ್ತು ಭೋಜನಾಲಯವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸುಮೇರಸಿಂಗ್ ಇಬ್ಬರೂ ರಾಜಸ್ಥಾನ ಮೂಲದವರು. ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿರುವವರು. ತಮ್ಮ ವೃತ್ತಿಯ ಜತೆಗೆ ಗಾಂಜಾ ಮಾರಾಟವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು 17,000 ರೂ.ಗೆ 1 ಕೆ.ಜಿ. ಗಾಂಜಾ ಕೊಟ್ಟು ಹೋಗುತ್ತಿದ್ದ. ಅದನ್ನು ನಾವು ಮಾರಾಟ ಮಾಡುತ್ತಿದ್ದೆವು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ಗಾಂಜಾ ವಶ, ನಾಲ್ವರ ಬಂಧನ
    ಧಾರವಾಡ:
    ನಗರದ ಎಲ್​ಐಸಿ ವಸತಿ ಗೃಹದ ಸಮೀಪದ ಉದ್ಯಾನದ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ನಾರಾಯಣಪುರದ ಸಮೀವುಲ್ಲಾ ಅಲ್ಲಾಭಕ್ಷ ಹುಬ್ಬಳ್ಳಿ (22), ಝುಡ್ಸನ್ ಲೂಯಿಸ್ ಮಿರಜಕರ್ (25), ಗರಗ ಗ್ರಾಮದ ಮಂಜುನಾಥ ಶಿವಾನಂದ ಜಂತ್ಲಿ (23) ಹಾಗೂ ದಾನೇಶ್ವರಿ ನಗರದ ಸಂಗಮೇಶ ಅಂದಾನಪ್ಪ ಅಂಗಡಿ (23) ಬಂಧಿತ ಆರೋಪಿಗಳು. ಬಂಧಿತರಿಂದ 20 ಸಾವಿರ ರೂ. ಮೌಲ್ಯದ 1074 ಗ್ರಾಂ. ಗಾಂಜಾ, 4 ಮೊಬೈಲ್, 2 ದ್ವಿಚಕ್ರ ವಾಹನ ಹಾಗೂ 430 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಉದ್ಯಾನ ಬಳಿ 2 ವಾಹನಗಳಲ್ಲಿ ಆಗಮಿಸುವ ಯುವಕರು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸೆ. 11ರಂದು ಮಾಹಿತಿ ಲಭ್ಯವಾಗಿತ್ತು. ಈ ಕುರಿತು ದೂರು ದಾಖಲಿಸಿಕೊಂಡ ಉಪನಗರ ಠಾಣೆ ಪೊಲೀಸರು, ಭಾನುವಾರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts