More

    ಮತಾಂತರ ನಿಲ್ಲಿಸಿ ಎನ್.ಆರ್.ಪುರ ಉಳಿಸಿ

    ಎನ್.ಆರ್.ಪುರ: ಮತಾಂತರ ವಿರೋಧಿಸಿ ಮುಂದಿನ ತಿಂಗಳು ಎಲ್ಲ ಹಿಂದು ಸಂಘಟನೆಗಳ ಸಹಕಾರದಿಂದ ‘ಮತಾಂತರ ನಿಲ್ಲಿಸಿ ಎನ್.ಆರ್.ಪುರ ಉಳಿಸಿ’ ಆಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಧರ್ಮದವರೂ ಅವರ ಜಾತಿ, ಮತದ ಬಗ್ಗೆ ಪ್ರಚಾರ ಮಾಡಿಕೊಳ್ಳಲಿ. ಆದರೆ ಮತಾಂತರಕ್ಕೆ ಅವಕಾಶವಿಲ್ಲ. ಸೋಷಿಯಲ್ ವೆಲ್​ಫೇರ್ ಸೊಸೈಟಿ ಎಂಬುದು ಒಂದು ವ್ಯವಸ್ಥಿತ ಸೇವೆಯ ಮುಖವಾಡ ತೊಟ್ಟ ಸಂಘಟನೆಯಾಗಿದೆ ಎಂದು ಆರೋಪಿಸಿದರು.

    ಎನ್.ಆರ್.ಪುರದಲ್ಲಿ 60ಕ್ಕೂ ಹೆಚ್ಚು ಚರ್ಚ್​ಗಳಿದ್ದು, ದೇವಸ್ಥಾನಗಳ ಸಂಖ್ಯೆ ಕಡಿಮೆ. ವೇಗವಾಗಿ ಚರ್ಚ್​ಗಳ ಸಂಖ್ಯೆ ಬೆಳೆಯುತ್ತಿದೆ. ಕ್ರೖೆಸ್ತರ ಕೆಲ ಸಂಘಟನೆಗಳು ಉತ್ತರ ಕರ್ನಾಟಕ, ಬಯಲು ಸೀಮೆಯಿಂದ ಕೂಲಿಗಾಗಿ ಬಂದ ಜನರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡಿಸುತ್ತಿರುವ ದೂರುಗಳು ಕೇಳಿಬಂದಿವೆ. ಮತಾಂತರ ವಿರೋಧಿಸಿ ಮುಂದಿನ ತಿಂಗಳು ಎಲ್ಲ ಹಿಂದು ಸಂಘಟನೆಗಳ ಸಹಕಾರದಿಂದ ಮತಾಂತರ ನಿಲ್ಲಿಸಿ ಎನ್.ಆರ್.ಪುರ ಉಳಿಸಿ ಆಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಪರ ಸಂಘಟನೆಗಳಿಗೆ ಮನ್ನಣೆ ನೀಡಿಲ್ಲ. ಹಿಂದು ಸಂಘಟನೆಗೆ ಬಲ ತುಂಬುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿಲ್ಲ, ಶ್ರೀರಾಮ ಸೇನೆ ಸೇರಿದಂತೆ ಎಲ್ಲ ಹಿಂದು ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ, ರೌಡಿ ಶೀಟರ್ ಹಾಕಲಾಗಿದೆ. ಸರ್ಕಾರ ಅದನ್ನು ತೆಗೆಸಿಲ್ಲ. ರಾಜ್ಯದಲ್ಲಿ ಶ್ರೀರಾಮ ಸೇನೆ ನಂ.1 ಸೇನೆಯಾಗಿದೆ. ಕರ್ನಾಟಕದಲ್ಲಿ ಹಿಂದು ವಿರುದ್ಧ ಗಲಭೆ, ಕೊಲೆ ನಡೆದರೂ ಹಿಂದುಗಳ ಪರ ಮೊದಲ ಧ್ವನಿ ಎತ್ತುವುದೇ ಶ್ರೀರಾಮ ಸೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts