More

    ಮತದಾರ ಚೀಟಿ ಅಕ್ರಮ ತಡೆಗೆ ಆಧಾರ್ ಲಿಂಕ್ ಅಗತ್ಯ: ಸಚಿವೆ ಜೊಲ್ಲೆ

    ವಿಜಯಪುರ: ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿದರೆ ಅಕ್ರಮ ತಡೆಯಲು ಸಾಧ್ಯ ಎಂದು ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

    ಗಡಿಭಾಗದಲ್ಲಿ ಅಕ್ರಮ ಮತದಾರರ ಹಾವಳಿ ಹೆಚ್ಚುತ್ತಿರುವ ಬಗ್ಗೆ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈವರೆಗೆ ಈ ಬಗ್ಗೆ ಗಮನಕ್ಕಿರಲಿಲ್ಲ. ಈಗಾಗಲೇ ಸಂಸದರು ಸಹ ಈ ಕುರಿತು ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದೀರೆಂದು ತಿಳಿಸಿದ್ದೀರಿ ಅದನ್ನಾಧರಿಸಿ ಮತದಾರರ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಗ್ರಾಪಂ ಚುನಾವಣೆ ಶಾಂತಿ ಹಾಗೂ ಸುವ್ಯವಸ್ಥಿತ ವಾಗಿ ನಡೆಸಲು ಸಹಕರಿಸಬೇಕು.
    ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಆ ಮೂಲಕ ಚುನಾವಣೆ ಯಶಸ್ವಿಯಾಗಿ ನೆರವೇರಲು ಸಹಕರಿಸಬೇಕೆಂದರು.

    ಸಾಕಷ್ಟು ಸವಾಲು ಗಳ ಮಧ್ಯೆ ಸರ್ಕಾರ ಜನಪರ ಆಡಳಿತ‌ ನೀಡುತ್ತಿದೆ. ಕರೊನಾ, ನೆರೆ ಹಾಗೂ ಅತೀವೃಷ್ಟಿ ನಡುವೆಯೂ ರಾಜ್ಯದ ಜನತೆಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಭೀಮಾ ಮತ್ತು ಡೋಣಿ ನದಿ ತೀರದಲ್ಲಿ
    2.33 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಈಗಾಗಲೇ ಪರಿಹಾರ ನೀಡಲಾಗುತ್ತಿದೆ ಎಂದರು.

    ವಿಪ ಸದಸ್ಯ ಅರುಣ ಶಹಾಪುರ, ಮಾಜಿ‌ ಶಾಸಕ ಎಸ್.ಕೆ. ಬೆಳ್ಳುಬ್ಬಿ, ಆರ್.ಎಸ್. ಪಾಟೀಲ ಕೂಚಬಾಳ, ದಯಾಸಾಗರ ಪಾಟೀಲ, ಶಿವರುದ್ರ ಬಾಗಲಕೋಟ, ಅಶೋಕ ಅಲ್ಲಾಪುರ, ವಿಜಯಕುಮಾರ ಜೋಷಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts