More

    ಮತದಾರರೇ ದೇಶದ ಸಾರ್ವಭೌಮ

    ಕಿಕ್ಕೇರಿ: ವಿಶ್ವದಲ್ಲಿ ಬಲುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಮತದಾರರೇ ಸಾರ್ವಭೌಮರಾಗಿದ್ದು, ಮತದಾನ ಕಡ್ಡಾಯವಾಗಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.

    ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಪ್ರಧಾನವಾಗಿದೆ. ಮಕ್ಕಳು ತಮ್ಮ ಪೋಷಕರು, ನೆರೆಹೊರೆಯವರನ್ನು ಮತದಾನ ಮಾಡಲು ಹಾಗೂ ಅದರ ಮಹತ್ವವನ್ನು ತಿಳಿಸುವ ಕೆಲಸ ಮಾಡಬೇಕು. ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನವೇ ಬ್ರಹ್ಮಾಸ್ತ್ರ ಎಂದರು.

    1950ರಲ್ಲಿ ಚುನಾವಣಾ ಆಯೋಗ ಸ್ಥಾಪಿತವಾಗಿ, 2011ರಲ್ಲಿ ದೇಶಾದ್ಯಂತ ರಾಷ್ಟ್ರೀಯ ಮತದಾರ ದಿನ ಆರಂಭವಾಗಿದೆ. ರಾಜಕೀಯ ಸ್ವಾತಂತ್ರ್ಯವಿಲ್ಲದೆ ನಾಗರಿಕ ಸ್ವಾತಂತ್ರ್ಯವಿಲ್ಲ ಎಂಬ ಪರಿಮಿತಿಯಲ್ಲಿ ಪ್ರಜಾಪ್ರಭುತ್ವ ಪರಿಪೂರ್ಣವಾಗಲು ಮತದಾನ ಒಂದೇ ಮಾರ್ಗವಾಗಿದೆ. ಸಾರ್ವಜನಿಕ ಬದುಕಿನ ವಿಕಸನಕ್ಕೆ ಚುನಾವಣೆ, ಮತದಾನ ಪವಿತ್ರವಾಗಿದೆ. ಜಾತಿ, ಲಿಂಗ ಭೇದವಿಲ್ಲದೆ 18 ವರ್ಷ ಮೇಲ್ಪಟ್ಟ ಭಾರತೀಯ ಪೌರತ್ವದ ಎಲ್ಲರೂ ಮತದಾನದ ಹಕ್ಕು ಉಳ್ಳವರಾಗಿದ್ದಾರೆ. ಪ್ರತಿಯೊಂದು ಮತದಾನವೂ ಉತ್ತಮ ರಾಜಕೀಯ ನಾಯಕ, ಸುಭದ್ರ ಆಡಳಿತವನ್ನು ನಿರ್ಮಿಸಲು ಸಹಾಯವಾಗಲಿದೆ ಎಂಬುದನ್ನು ತಿಳಿಹೇಳುವ ಕೆಲಸವಾಗಬೇಕಿದೆ ಎಂದರು.

    ಮುಕ್ತ ಮತದಾನ ಹಕ್ಕನ್ನು ವಿಧಾನಸಭೆ, ಲೋಕಸಭೆ, ತಾಲೂಕು, ಜಿಲ್ಲಾ, ಗ್ರಾಮ ಪಂಚಾಯಿತಿ ಆಡಳಿತವನ್ನು ಸಂವಿಧಾನಾತ್ಮಕವಾಗಿ ನೀಡಲು ಪ್ರಜೆಗಳಿಂದ ಸಾಧ್ಯ ಎಂಬುದನ್ನು ಸಮುದಾಯಕ್ಕೆ ತಿಳಿಸುವ ಕೆಲಸ ಜರೂರು ಆಗಬೇಕಿದೆ ಎಂದು ತಿಳಿಸಿದರು.

    ಉಪಪ್ರಾಂಶುಪಾಲ ಬಸವರಾಜು, ಶಿಕ್ಷಕರಾದ ಎಸ್.ಎಂ.ಬಸವರಾಜು, ಬಿ.ಎನ್.ಪರಶಿವಮೂರ್ತಿ, ರವಿಕುಮಾರ್, ಉಮೇಶ್, ಸುರೇಶ್, ಭಾಸ್ಕರ್, ಸುನೀತಾ, ಸವಿತಾ, ನಿರ್ಮಲಾ, ಗೌರಮ್ಮ, ಲೀಲಾವತಿ, ಗೀತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts