More

    ಮತದಾನ ಪ್ರಕ್ರಿಯೆಯನ್ನು ನ್ಯಾಯ ಸಮ್ಮತವಾಗಿ ನಡೆಯಲಿ


    ಯಾದಗಿರಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯನ್ನು ನ್ಯಾಯ ಸಮ್ಮತ, ಪರಿಣಾಕಾರಿಯಾಗಿ ನಡೆಯುವಂತೆ ಹಾಗೂ ಯಾವುದೇ ರೀತಿಯ ಚುನಾವಣಾ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಎಂದು ತಾಪಂ ಇಒ ಬಸವರಾಜ ಶರಬೈ ಸೂಚಿಸಿದರು.
    ಶನಿವಾರ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ತಡೆಯಲು ರಚಿಸಿದ ಕ್ಷಿಪ್ರ ಸಂಚಾರಿ ದಳದ ಕಾರ್ಯಕ್ಷೇತ್ರದ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಯಾವುದೇ ರಾಜಕೀಯ ಪಕ್ಷ ನಿಯಮ ಬಾಹಿರವಾಗಿ ಸಭೆ,ಸಮಾರಂಭಗಳನ್ನು ಮಾಡುವುದನ್ನು ಗುರುತಿಸಿ, ವಿಡಿಯೋ ಚಿತ್ರಿಕರಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.
    ರಾಜಕೀಯ ಪಕ್ಷದವರು ಪರವಾನಗಿ ಇಲ್ಲದೆ, ಸಭೆ-ಸಮಾರಂಭಗಳನ್ನು ಹಮ್ಮ್ಮಿಕೊಂಡಲ್ಲಿ, ನಿಯಮನುಸಾರ ಅಗತ್ಯ ಕ್ರಮಕೈಗೊಳ್ಳಬೇಕು. ಸಭೆಯಲ್ಲಿ ಅನೈತಿಕ, ಅವಹೇಳನಕಾರಿ ಪದಗಳನ್ನು ಬಳಸಿದಲ್ಲಿ ವಿಡಿಯೋ ಚಿತ್ರಿಕರಿಸಿ, ಪದ ಬಳಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಿ, ಪ್ರಕರಣ ದಾಖಲಿಸುವಂತೆ ತಿಳಿಸಿದರು.
    ಯಾದಗಿರಿ ಮತಕ್ಷೇತ್ರದ ಕ್ಷೀಪ್ರ ಸಂಚಾರಿ ದಳದವರು ದಿನದ 24/7 ಗಂಟೆಗಳ ಕಾಲ ಚುನಾವಣೆಗೆ ಸಂಬಂಸಿದಂತೆ ನಡೆಯುವ ಸಭೆಗಳ ಮೇಲೆ ಹದ್ದಿನ ಕಣ್ಣೀರಿಸಿ ನಿಗಾವಹಿಸಬೇಕು. ಶಾಂತಿಯುತವಾಗಿ ಚುನಾವಣೆಗಳು ನಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

    ಬಸವರಾಜ ಸಜ್ಜನ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts