More

    ಮತದಾನ ಜಾಗೃತಿ, ಬೀದಿ ನಾಟಕ ಪ್ರದರ್ಶನ

    ಬೆಳಗಾವಿ: ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಬಾನುವಾರ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದ ಚಾವಟ ವೃತದಲ್ಲಿ ಕಾಲ್ನಡಿಗೆ ಮತದಾನ ಜಾಗೃತಿ ಮತ್ತು ಬೀದಿ ನಾಟಕಕ್ಕೆ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಚಾಲನೆ ನೀಡಿದರು.

    ಗ್ರಾಮದ ಚಾವಟ ವೃತ್ತದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆವರೆಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಳಿಕ ಶಾಲೆಯ ಆವರಣದಲ್ಲಿ ಚುನಾವಣೆಯ ಕುರಿತು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. ‘ಪ್ರಜಾಪ್ರಭುತ್ವ ಹಬ್ಬ ಮೇ 10 ಮತದಾನ’ ಎಂಬ ಧ್ಯೇಯದೊಂದಿಗೆ ಧ್ವಜಾರೋಹಣ ಮಾಡಲಾಯಿತು. ನಮ್ಮ ನಡೆ ಮತಕಟ್ಟೆಯ ಕಡೆಗೆ.

    ಪ್ರತಿ ಮತಗಟ್ಟೆಯನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ರವಿ ಬಂಗಾರೆಪ್ಪನವರ ತಿಳಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ದಾನವಾಡಕರ, ಸಹಾಯಕ ನಿರ್ದೇಶಕ (ಪ.ರಾ) ಗಣೇಶ ಕೆ.ಎಸ್., ಪಿಡಿಒ ಜಿ.ಐ.ಬರಗಿ ಇತರರಿದ್ದರು.

    ಬಸ್ತವಾಡದಲ್ಲೂ ಚಾಲನೆ: ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂ ವತಿಯಿಂದ ಶನಿವಾರ ತಾಲೂಕಿನ ಬಸ್ತವಾಡ ಗ್ರಾಪಂ ಆವರಣದಲ್ಲಿ ಕಾಲ್ನನಡಿಗೆ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಹರ್ಷಲ್ ಭೊಯರ್ ಚಾಲನೆ ನೀಡಿದರು.

    ನರೇಗಾ ಕೂಲಿ ಕಾರ್ಮಿಕರೊಂದಿಗೆ ಸಂವಾಹದ ನಡೆಸಿ ಬಳಿಕ ಮಾತನಾಡಿದ ಅವರು, ಗ್ರಾಮದ ಸಾರ್ವಜನಿಕರು ಮತ್ತು ನರೇಗಾ ಕಾಯಕ ಬಂದು, ಕೂಲಿ ಕಾರ್ಮಿಕರು ಎಲ್ಲರೂ ತಪ್ಪದೇ ಮೇ 10ರಂದು ಮತದಾನ ಮಾಡಬೇಕು. ಪ್ರತಿ ವರ್ಷ ಬೆಳಗಾವಿ ತಾಲೂಕಿನಲ್ಲಿ ನರೇಗಾ ಕಾಮಗಾರಿ ಕೆಲಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಭಾಗವಹಿಸುತ್ತಿದ್ದು, ಪ್ರಸಕ್ತ ಸಾಲಿನ ನರೇಗಾ ಕಾಮಗಾರಿಯಲ್ಲಿ ಭಾಗವಹಿಸಿ ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಿಪಂ ಯೋಜನಾ ನಿರ್ದೇಶಕರಾದ ರವಿ ಬಂಗಾರೆಪ್ಪನವರ, ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ ದಾನವಾಡಕರ, ಪಿಡಿಒ ಶ್ವೇತಾ ಡಿ.ಆರ್.ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts