More

    ಮತದಾನಕ್ಕೆ ಅಗತ್ಯ ತಯಾರಿ

    ಭಟ್ಕಳ: ಹೊನ್ನಾವರ ಮತ್ತು ಭಟ್ಕಳ ತಾಲೂಕಿನಲ್ಲಿ ಒಟ್ಟು 40 ಗ್ರಾಮ ಪಂಚಾಯಿತಿಗಳು ಇದ್ದು, ಮಂಗಳವಾರ ನಡೆಯುವ ಚುನಾವಣೆಗೆ ಅಗತ್ಯ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಕೋವಿಡ್ ಪಾಸಿಟಿವ್ ಇದ್ದವರಿಗೂ ಪತ್ರ ಕಳುಹಿಸಿದ್ದು ಅವರೂ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಭರತ ಎಸ್. ಹೇಳಿದರು.

    ಭಟ್ಕಳ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಟ್ಕಳದಲ್ಲಿ 284, ಹೊನ್ನಾವರದಲ್ಲಿ 323 ಸದಸ್ಯ ಸ್ಥಾನಗಳಿವೆ. ಉಭಯ ತಾಲೂಕುಗಳಲ್ಲಿ 40 ಚುನಾವಣಾಧಿಕಾರಿ, 46 ಸಹಾಯಕ ಚುನಾವಣಾಧಿಕಾರಿ ನಿಯೋಜನೆ, 240 ಮುಖ್ಯ ಮತಗಟ್ಟೆ, 66 ಹೆಚ್ಚುವರಿ ಮತಗಟ್ಟೆ ತೆರೆಯಲಾಗಿದೆ. ಭಟ್ಕಳ ತಾಲೂಕಿನಲ್ಲಿ 93,255 ಮತದಾರರು, ಹೊನ್ನಾವರದಲ್ಲಿ 1,05634 ಮತದಾರರು ಇದ್ದಾರೆ. ಭಟ್ಕಳದ ಸುಧೀಂದ್ರ ಕಾಲೇಜ್ ಹಾಗೂ ಹೊನ್ನಾವರದ ಹೋಲಿ ರೋಸರಿ ಪಿಯು ಕಾಲೇಜ್​ನಲ್ಲಿ ಡಿ ಮಸ್ಟರಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಭಟ್ಕಳದಲ್ಲಿ 600 ಸಿಬ್ಬಂದಿ, ಹೊನ್ನಾವರದಲ್ಲಿ 968 ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ ಎಂದರು. ತಹಸೀಲ್ದಾರ್ ಎಸ್. ರವಿಚಂದ್ರ, ರಾಜು ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts