More

    ಮತಗಟ್ಟೆಯತ್ತ ತೆರಳಿದ ಸಿಬ್ಬಂದಿ

    ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್ ಜಿಟಿಎಸ್ ಕ್ಯಾಂಪಸ್ ಹಾಗೂ ಲ್ಯಾಮಿಂಗ್ಟನ್ ಬಾಲಕರ ಪ್ರೌಢ ಶಾಲೆಯಲ್ಲಿ ಮಂಗಳವಾರ ಮಸ್ಟರಿಂಗ್ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ತರಬೇತಿ ಮತ್ತು ಹಲವು ಸೂಚನೆ ನೀಡಲಾಯಿತು. ಬಳಿಕ ಎವಿಎಂ ಮತಯಂತ್ರಗಳೊಂದಿಗೆ ಅಧಿಕಾರಿಗಳು ಮತಗಟ್ಟೆಯತ್ತ ಹೆಜ್ಜೆ ಹಾಕಿದರು.

    ಇವಿಎಂ ಮತಯಂತ್ರಗಳ ಅಳವಡಿಕೆ, ತೆಗೆದುಕೊಂಡು ಹೋಗುವ ರೀತಿ, ಮತದಾರರನ್ನು ಕರೆ ತರುವ ಪರಿ, ಕೈ ಬೆರಳಿಗೆ ಶಾಯಿ ಹಚ್ಚುವುದು ಸೇರಿ ಹಲವು ವಿಚಾರಗಳ ಕುರಿತು ಚುನಾವಣಾಧಿಕಾರಿ ಡಾ.ಬಿ. ಗೋಪಾಲಕೃಷ್ಣ ಅವರು ಸಿಬ್ಬಂದಿಗೆ ಮಾಹಿತಿ ನೀಡಿದರು. ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. ಚುನಾವಣಾಧಿಕಾರಿಯಿಂದ ಸಮಗ್ರ ಮಾಹಿತಿ ಪಡೆದ ಸಿಬ್ಬಂದಿ, ಇವಿಎಂ ಮತ ಯಂತ್ರಗಳೊಂದಿಗೆ ಮತಗಟ್ಟೆಯತ್ತ ಹೆಜ್ಜೆ ಹಾಕಿದರು. ಮೇ 10ರಂದು ನಡೆಯಲಿರುವ ಮತದಾನೋತ್ಸವದಲ್ಲಿ ಭಾಗವಹಿಸುವ ಹುಮ್ಮಸ್ಸು ತೋರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts