More

    ಮತಕ್ಷೇತ್ರದ ಜನರ ಸೇವೆ ನನ್ನ ಧ್ಯೇಯ


    ಯಾದಗಿರಿ: ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳು ನನ್ನ ವಿರುದ್ಧ ಎಷ್ಟೇ ಅಪಪ್ರಚಾರ ನಡೆಸಿದರೂ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ನಿಮ್ಮ ಋಣ ತೀರಿಸಲು ಹಗಲಿರುಳು ಶ್ರಮಿಸುತ್ತೇನೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

    ಸಚಿವರಾದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯ ಶಹಾಪುರ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಆರಬೋಳ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ನಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮತಕ್ಷೇತ್ರದ ಜನತೆ 5 ಬಾರಿ ನನ್ನನ್ನು ಗೆಲ್ಲಿಸಿ ಮೂರು ಬಾರಿ ಮಂತ್ರಿ ಆಗುವ ಅವಕಾಶ ಕೊಟ್ಟಿದ್ದೀರಿ, ನಿಮ್ಮ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಯಾವ ತಾರತಮ್ಯ ಇಲ್ಲದಂತೆ ನಿಮ್ಮೆಲ್ಲರ ಆಶಯಗಳನ್ನು ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ರಾಜ್ಯದ ಜನರ ಸಂಪೂರ್ಣ ಬೆಂಬಲದಿಂದ ಇಂದು ರಾಜ್ಯದಲ್ಲಿ ನಮ್ಮ ಪಕ್ಷ ಅಕಾರಕ್ಕೆ ಬಂದಿದ್ದು, ಜನರ ಆಶಯಗಳನ್ನಿ ಇಡೇರಿಸುವ ಮೂಲಕ ಕನ್ನಡ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಹೇಳಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನುಡಿದಂತೆ ನಡೆದಿದ್ದಾರೆ. ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಗ್ಯಾಂರೆಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಬಿಜೆಪಿ ಏನೆಲ್ಲಾ ಪ್ರಯತ್ನ ಮಾಡಿದರೂ ಆ ಪಕ್ಷವನ್ನು ಜನತೆ ಅಕಾರದಿಂದ ದೂರವಿಡುವ ಮೂಲಕ ಪ್ರಭುದ್ಧತೆ ಮೆರೆದಿದ್ದಾರೆ. ಈ ಗ್ಯಾರೆಂಟಿಗಳ ಬಗ್ಗೆ ವಿಪಕ್ಷಗಳಿಗೆ ಚಿಂತೆ ಬೇಡ. ಇದಕ್ಕೆ ಹಣ ಹೇಗೆ ಹೊಂದಿಸಬೇಕು ಎಂಬುದು ನಮ್ಮ ಮುಖ್ಯಮಂತ್ರಿಗಳಿಗೆ ಚನ್ನಾಗಿ ಗೊತ್ತಿದೆ ಎಂದು ಟಾಂಗ್ ನೀಡಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿ, ನಗರದ ಮೂಲಭೂತ ಸೌಕರ್ಯಗಳು, ಬಾಕಿ ಇರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ನೀಡಿ ಸುಂದರ ಸ್ವಚ್ಛ ನಗರಕ್ಕೆ ಆದ್ಯತೆ ನೀಡುವಲ್ಲಿ ಸಚಿವರು ಕಾಳಜಿ ವಹಿಸಬೇಕು, ದರ್ಶನಾಪುರ ಸಚಿವರಾಗಿರುವುದರಿಂದ ಯಾದಗಿರಿ ಜಿಲ್ಲೆಗೆ ಅಭಿವೃದ್ಧಿಯ ಬಲ ಬಂದಿದೆ ಎಂದರು.
    ಕಾರ್ಯಕ್ರಮಕ್ಕೂ ಮುಂಚೆ ನಗರದಲ್ಲಿನ ಪ್ರಮುಖ ಮಹಾತ್ಮರ ಪುತ್ಥಳಿಗೆ ಕಾರ್ಯಕರ್ತರೊಂದಿಗೆ ತೆರಳಿ ಗೌರವ ಸಮಪರ್ಿಸಿದರು, ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts