More

    ಮಠಗಳಿಗೆ ಭಕ್ತರೇ ಆಸ್ತಿಯಾಗಲಿ

    ಬಸವಕಲ್ಯಾಣ: ಮಠಗಳಿಗೆ ಪೀಠಾಧಿಪತಿ ಆಗುವವರು ಮಠದ ಆಸ್ತಿ, ಅಂತಸ್ತು ನೋಡದೆ ಭಕ್ತರನ್ನು ಆಸ್ತಿ ಮಾಡಿಕೊಂಡು ಮಠದ ಏಳಿಗೆಯನ್ನು ಮಾಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ನೋಡಬಹುದು. ಘಟದಿಂದ ಮಠವಾಗಬೇಕೆ ಹೊರತು ಮಠದಿಂದ ಘಟವಾಗಬಾರದು ಎಂದು ಹುಲಸೂರು ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಮಂಠಾಳ ಗ್ರಾಮದಲ್ಲಿ ಶುಕ್ರವಾರ ಶ್ರೀ ಗುರುಲಿಂಗೇಶ್ವರ ವಿರಕ್ತ ಮಠದ ನಿಯೋಜಿತ ಮರಿದೇವರಾದ (ಉತ್ತರ ಅಧಿಕಾರಿ) ಶ್ರೀ ಮಲ್ಲಿಕಾಜರ್ುನ ದೇವರ ಪುರಪ್ರವೇಶ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ ನೇತೃತ್ವ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕತೆಗೆ ಬಂದಾಗ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

    ಶಿಕ್ಷಣ ಇಲ್ಲದಿದ್ದರೆ ಯಾವುದನ್ನು ಪಡೆಯಲಾಗುವುದಿಲ್ಲ. ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಭಕ್ತ ಮಠದ ಮರಿದೇವರನ್ನು ತಮ್ಮ ಮನೆಯ ಮೊದಲ ಮಗನೆಂದು ತಿಳಿದು ನಡೆದುಕೊಂಡು ಹೋಗಬೇಕೆಂದು ಎಂದು ಕೇಳಿಕೊಂಡರು.

    ನಾಗೂರ ಶ್ರೀ ಅಲ್ಲಮ ಪ್ರಭುಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಬಹುಮುಖ್ಯವಾಗಿದ್ದು, ಸೇವೆ ಜತೆಗೆ ಗುರುವಿನ ವಾಕ್ಯ ಪರಿಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

    ಗುರುಲಿಂಗೇಶ್ವರ ವಿರಕ್ತ ಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀ ಮಲ್ಲಿಕಾಜರ್ುನ ದೇವರು ಮಾತನಾಡಿ, ಸಮಾಜದಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ನಾನು ಬಂದಿದ್ದು, ಯಾವುದೇ ಆಸ್ತಿ ಅಂತಸ್ತು ಅವಶ್ಯಕತೆ ಇಲ್ಲ. ಭಕ್ತರೇ ನನಗೆ ಎಲ್ಲವೂ ಎಂದು ತಿಳಿಸಿದರು.

    ರಟಕಲ್ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ಖೇಡರ್ಾ(ಬಿ)ದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪ್ರಮುಖರಾದ ಪ್ರದೀಪ ವಾತಡೆ, ಕಾಶಣ್ಣ ಸಾತ್ಭಾಯಿ, ರಾಮಲಿಂಗಪ್ಪ ಹಾರಕೂಡೆ, ಮಲ್ಲಿಕಾಜರ್ುನ ಮಹಾಜನ್, ಪುಷ್ಪರಾಜ ಹಾರಕೂಡೆ, ಗಿರೀಶ ತಾಂಬೋಳಿ, ಶಾಂತಪ್ಪ ಶೆಟಗಾರ, ರಾಚಣ್ಣ ಕೊರಳೆ, ಗುರುಲಿಂಗಪ್ಪ ಮುಸ್ತಾಪುರೆ, ಕಲ್ಲಪ್ಪ ಖಸ್ಗೆ, ವಿಶ್ವನಾಥ ಹುಗ್ಗೆ ಪಾಟೀಲ್, ಅರುಣಕುಮಾರ ಬಟಗೆರೆ, ಶಂಭುಲಿಂಗ ರಾಮದಾಸೆ, ಅಪ್ಪಣ್ಣ ಸಜ್ಜನಶೆಟ್ಟಿ, ಸಿದ್ದರಾಮ ಉಮ್ಮರಗೆ, ಅರುಣಕುಮಾರ ಮಸ್ಗಲ್ಲೆ, ಧನರಾಜ್ ಸಾತ್ಭಾಯ್, ಲೋಕೇಶ ಪಾಟೀಲ್, ಬಸವರಾಜ ಮದ್ದಗರ್ೆ, ಉಮಕಾಂತ ಪಾಟೀಲ್, ಗಜಾನಂದ ಪಾಟೀಲ್, ಸಂಗಪ್ಪ ಸಜ್ಜನ್ಶೆಟ್ಟಿ, ಅಮುಲ್ ಚುಚ್ಚುಕೋಟೆ, ಬಾಬು ಪಾಟೀಲ್, ಕಾಂತು ಪಾಟೀಲ್ ಇತರರಿದ್ದರು.

    ಶಿವಕುಮಾರ ಶೆಟಗಾರ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ಪೊಲೀಸ್ ಪಾಟೀಲ್ ಸ್ವಾಗತಿಸಿದರು. ಸಂಗಪ್ಪ ವಗಶೆಟ್ಟೆ ವಂದಿಸಿದರು. ರವೀಂದ್ರ ಶಾಯಪ್ಪ ನಿರೂಪಣೆ ಮಾಡಿದರು. ಶ್ರೀ ಮಲ್ಲಿಕಾಜರ್ುನ ದೇವರನ್ನು ಶ್ರೀ ಯಲ್ಲಾಲಿಂಗೇಶ್ವರ ಮಠದಿಂದ ಸಾರೋಟದಲ್ಲಿ ಗ್ರಾಮದ ಪ್ರಮುಖ ರಸ್ತೆಗಳ ಮಾರ್ಗವಾಗಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts