More

    ಮಗು ರಕ್ಷಿಸಲು ಹೋಗಿ ಇಬ್ಬರು ಸಾವು

    ಶ್ರೀರಂಗಪಟ್ಟಣ: ತಾಲೂಕಿನ ಕಾಳೇನಹಳ್ಳಿ ಶೆಡ್ ಗ್ರಾಮದಲ್ಲಿ ಶುಕ್ರವಾರ ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗುತ್ತಿದ್ದ ಮಗು ರಕ್ಷಣೆ ಮಾಡಲು ಹೋಗಿ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗ್ರಾಮದ ಕುಮಾರ ಎಂಬುವರ ಪುತ್ರಿ ಇಲಾಮತಿ(19), ರಾಮಭೋವಿ ಎಂಬುವರ ಪುತ್ರಿ ಮೀನಾ (17) ಮೃತರು.

    ಇಲಾಮತಿ, ಮೀನಾ ಹಾಗೂ ಅವರ ತಾಯಂದಿರು 6 ವರ್ಷದ ಮಗುವಿನೊಂದಿಗೆ ಸರ್ಕಾರಿ ಗೋಮಾಳದಲ್ಲಿರುವ ಕಲ್ಲುಕ್ವಾರಿಯ ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಈ ವೇಳೆ ಮಗು ಆಟವಾಡುತ್ತ ನೀರಿಗೆ ಬಿದ್ದಿದೆ. ಮಗುವನ್ನು ರಕ್ಷಣೆ ಮಾಡಲು ಇಲಾಮತಿ ಹಾಗೂ ಮೀನಾ ಕೆರೆಗೆ ಇಳಿದು ದಡದಲ್ಲಿ ನಿಂತಿದ್ದ ಪಾಲಕರಿಗೆ ಮಗು ನೀಡಿದ್ದಾರೆ. ಆದರೆ ಈ ಯುವತಿಯರು ನೀರಿನಲ್ಲಿ ಮುಳುಗಿದ್ದಾರೆ. ಮಹಿಳೆಯರ ಚೀರಾಟದಿಂದ ಸ್ಥಳಕ್ಕೆ ಬಂದ ಗ್ರಾಮಸ್ಥರು ಯುವತಿಯರ ಶವಗಳನ್ನು ಮೇಲೆತ್ತಿದ್ದಾರೆ.
    ವಿಷಯ ತಿಳಿದು ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

    ನಿರ್ಲಕ್ಷೃವೇ ಕಾರಣ: ತಾಲೂಕಿನ ಕಾಳೇನಹಳ್ಳಿ ಶೆಡ್ ಗ್ರಾಮ ಸೇರಿದಂತೆ ಈ ಭಾಗದ ಹಲವೆಡೆಗಳಲ್ಲಿ ಈ ಹಿಂದೆ ಸರ್ಕಾರಿ ಗೋಮಾಳ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಕಾರಿಕೆ ನಡೆಸಲಾಗುತ್ತಿತ್ತು. ಅವುಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸ್ಥಗಿತಗೊಳಿಸಿತ್ತು. ಗಣಿಗಾರಿಕೆ ನಡೆಸಲು ಕೊರೆಯಲಾಗಿದ್ದ ಹಲವು ಬೃಹತ್ ಕ್ವಾರಿಗಳು ಮಳೆಯಿಂದ ನೀರು ತುಂಬಿಕೊಂಡು ಆಳವಾದ ಕೆರೆಗಳಂತಾಗಿವೆ. ಇಂತಹ ಅಪಾಯಕಾರಿ ಕ್ವಾರಿಗಳ ಸುತ್ತ ಯಾವುದೇ ತಂತಿ ಬೇಲಿಗಳು ಅಥವಾ ಸುರಕ್ಷತಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆ ಕೈಗೊಂಡಿಲ್ಲ. ಇದರಿಂದ ಸಾವು-ನೋವು ಸಂಭವಿಸುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts