More

    ಮಗುವಿನ ಮೇಲೆ ಬೀದಿನಾಯಿ ದಾಳಿ

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. 2 ವರ್ಷದ ಮಗುವಿನ ತಲೆ, ಮುಖ, ಹಣೆ, ಕಿವಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಿರೇಬಣ ಪ್ರದೇಶದ ಸಾದಿಯಾ ರೋಷನ್ ಕಿಲ್ಲೇದಾರ ಬೀದಿನಾಯಿಯ ದಾಳಿಗೊಳಗಾದ ಬಾಲಕಿ.

    ಕಳೆದ ಬುಧವಾರ ಸಂಜೆ ಮನೆ ಸಮೀಪ ಆಟವಾಡುತ್ತಿದ್ದಾಗ ಬೀದಿನಾಯಿಯೊಂದು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ. ಮಗುವಿಗೆ ಗದಗನ ಜಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಿಂದ ಬಾಲಕಿ ಆಘಾತಕ್ಕೊಳಗಾಗಿದ್ದಾಳೆ.

    ಜನರಿಗೆ ಭಯ: ಬೀದಿ ನಾಯಿಗಳ ಹಾವಳಿಯಿಂದ ಜನರು ವಾಕಿಂಗ್ ಮಾಡಲು ಹೆದರುವಂತಾಗಿದೆ. ಬೆಳಗ್ಗೆ ಹಾಲು, ಪೇಪರ್, ಹೂವು, ಹಣ್ಣು, ತರಕಾರಿ ಮಾರಾಟಗಾರರಿಗೆ ನಾಯಿಗಳು ಬೆನ್ನು ಹತ್ತುತ್ತಿವೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಅನೇಕ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.

    ಪಟ್ಟಣದಲ್ಲಿ ಎಲ್ಲಿಬೇಕೆಂದರಲ್ಲಿ ತಲೆ ಎತ್ತಿರುವ ಚಿಕನ್, ಎಗ್​ರೈಸ್, ಬೇಕರಿ, ಬೀದಿ ಬದಿಯ ಗೂಡಂಗಡಿಗಳು ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಗಳಾಗಿವೆ. ಪಟ್ಟಣದಲ್ಲಷ್ಟೇ ಅಲ್ಲದೆ, ಹೊರವಲಯದ ರೈತರ ಜಮೀನುಗಳಲ್ಲಿ ನಾಯಿಗಳ ಹಿಂಡು ಬೇಕಾಬಿಟ್ಟಿಯಾಗಿ ಓಡಾಡಿ ಬೆಳೆ ಹಾನಿ ಮಾಡುತ್ತಿವೆ.

    ಹಲವು ವರ್ಷಗಳಿಂದ ಬೀದಿ ನಾಯಿಗಳ ನಿಯಂತ್ರಣ ಕ್ರಮಗಳ ಬಗ್ಗೆ ಸ್ಥಳೀಯ ಪುರಸಭೆಯವರು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಅವುಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಈಗ ಇಡೀ ವಾತಾವರಣವನ್ನೇ ಹದಗೆಡಿಸಿವೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಪುರಸಭೆಗೆ ಮನವಿಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
    | ಜಾಕೀರ್ ಹುಸೇನ್ ಹವಾಲ್ದಾರ್, ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ತಾಲೂಕಾಧ್ಯಕ್ಷ

    ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಶು ಸಂಗೋಪನಾ ಇಲಾಖೆಯೊಂದಿಗೆ ರ್ಚಚಿಸಿ ಸಂತಾನಶಕ್ತಿ ಹರಣ ಚಿಕಿತ್ಸೆ, ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ರ್ಚಚಿಸಲಾಗುವುದು. ಸಾಕು ನಾಯಿ ಹೊಂದಿದವರು ಅವುಗಳಿಗೆ ಬೆಲ್ಟ್ ಹಾಕಬೇಕು.
    | ಆರ್.ಎಂ. ಪಾಟೀಲ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts