More

    ಮಕ್ಕಳ ಬೆಳವಣಿಗೆಗೆ ಕ್ರೀಡೆ ಪೂರಕ -ಎಸ್ಪಿ ಉಮಾ ಪ್ರಶಾಂತ್ – ಪೊಲೀಸ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಕ್ರೀಡಾಕೂಟ

    ದಾವಣಗೆರೆ: ಕ್ರೀಡೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

    ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಪೊಲೀಸ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬದುಕಿನಲ್ಲಿ ಶಿಸ್ತು, ಸಂಯಮ ಹಾಗೂ ಶಾಂತಿಯುತ ಮನೋಭಾವನೆ ಬೆಳೆಸಲು ಹಾಗೂ ಮನಸ್ಸನ್ನು ಹದಗೊಳಿಸಿ ಉತ್ತಮ ಆರೋಗ್ಯ ತಂದುಕೊಡಲು ಕ್ರೀಡೆಗಳು ಸಹಾಯಕಾರಿಯಾಗಿವೆ ಎಂದು ತಿಳಿಸಿದರು.
    ದೇಶದಲ್ಲಿ ಈಗ ಕ್ರೀಡೆಗೆ ಉತ್ತಮ ಭವಿಷ್ಯವಿದೆ. ಪಾಲಕರು ಮಕ್ಕಳಿಗೆ ಆಟಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಿ ಉತ್ತಮ ಕ್ರೀಡಾಪಟುಗಳನ್ನಾಗಿ ತಯಾರು ಮಾಡಬೇಕು ಎಂದು ಕಿವಿಮಾತು ಹೇಳಿದರು
    ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪಾಧೀಕ್ಷಕ ಪಿ.ಬಿ. ಪ್ರಕಾಶ್ ಮಾತನಾಡಿ, ಮಕ್ಕಳು ಗುಣಾತ್ಮಕ ಕಲಿಕೆಯ ಜತೆಗೆ ಕ್ರೀಡೆಯಲ್ಲಿಯೂ ಕೂಡ ಪ್ರಭಾವಕಾರಿಯಾಗಿ ತೊಡಗಿಸಿಕೊಳ್ಳುವುದು ಮುಖ್ಯ. ಆಸಕ್ತಿ ತೋರಿದರೆ ಕ್ರೀಡೆಯೇ ಭವಿಷ್ಯಕ್ಕೆ ಆಧಾರವಾಗುತ್ತದೆ ಎಂದು ತಿಳಿಸಿದರು
    ಶಾಲೆಯ ಪ್ರಾಚಾರ್ಯ ಎಚ್.ವಿ. ಯತೀಶ್ ಆಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜತೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರಿ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುತ್ತವೆ ಎಂದರು.
    ದಿನವಿಡೀ ನಡೆದ 18 ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರು. ಅಂತಿಮವಾಗಿ ಕೃಷ್ಣ ಹೌಸ್ ಚಾಂಪಿಯನ್ ಹಾಗೂ ಕಾವೇರಿ ಹೌಸ್ ರನ್ನರ್‌ಅಪ್ ಪ್ರಶಸ್ತಿಗೆ ಭಾಜನವಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts