More

    ಮಕ್ಕಳ ಜತೆ ಸಮಯ ಕಳೆಯಿರಿ

    ಮಳವಳ್ಳಿ: ಪಾಲಕರು ತಮ್ಮ ಮಕ್ಕಳೊಡನೆ ಬೆರೆತು ಅವರ ಆಟೋಟಗಳಲ್ಲಿ ಭಾಗಿಯಾಗುವುದರಿಂದ ಮಕ್ಕಳಿಗೆ ಪಾಲಕರ ಮೇಲಿನ ಬಾಂಧವ್ಯ ವೃದ್ಧಿಯಾಗಲಿದೆ ಎಂದು ನಿವೃತ್ತ ಸೈನಿಕ ರಾಮ್‌ಗೋಪಾಲ್ ತಿಳಿಸಿದರು.

    ಪಟ್ಟಣದ ತಾಲೂಕು ಸಾರ್ವಜನಿಕ ಕ್ರೀಡಾಂಗಣದಲ್ಲಿ ಅಲೋಕಿಡ್ಸ್ ಮಾಂಡವ್ಯ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕ್ರೀಡಾ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
    ಇತ್ತೀಚಿನ ಕಾಲಘಟ್ಟದಲ್ಲಿ ಪಾಲಕರು ತಮ್ಮ ಒತ್ತಡ ಜೀವನ ಶೈಲಿಗೆ ಸಿಲುಕಿ ಮಕ್ಕಳ ಬೆಳವಣಿಗೆಯಲ್ಲಾಗುವ ಬದಲಾವಣೆಗಳ ಬಗ್ಗೆ ಗಮನ ಹರಿಸದಿರುವುದು ವಿಷಾದದ ಸಂಗತಿ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂಬ ಹಂಬಲದಿಂದ ಶೈಕ್ಷಣಿಕತೆ ಸೇರಿದಂತೆ ಪ್ರತಿಯೊಂದು ಕಲಿಕೆಗೂ ಶುಲ್ಕಪಾವತಿಸಿ ಬೇರೊಬ್ಬರ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದ ತಮ್ಮ ಹೊಣೆಗಾರಿಕೆಯಿಂದ ವಂಚಿತರಾಗುತ್ತಿರುವ ಪಾಲಕರು ಮಕ್ಕಳಿಂದ ಪ್ರೀತಿ ಭಾಂದವ್ಯಗಳ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಇಂತಹ ಬೆಳವಣಿಗೆಯಿಂದ ಮುಂದೊಂದು ದಿನ ನಮ್ಮ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ದಿನದ ಕೆಲ ಸಮಯವಾದರೂ ಮಕ್ಕಳ ಜತೆಯಲ್ಲಿ ಕಳೆಯುವಂತೆ ಕರೆ ನೀಡಿದರು.

    ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಪಾಲಕರಿಗೂ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಲೂನ್ ಬ್ಯಾಲೆನ್ಸ್, ಓಟದ ಸ್ಪರ್ಧೆ, ಮ್ಯೂಜಿಕಲ್ ಚೇರ್ ಆಟಗಳನ್ನು ಪಾಲಕರು ತಮ್ಮ ಮಕ್ಕಳೊಡನೆ ಸೇರಿ ಆಡುವ ಮೂಲಕ ಖುಷಿಯಿಂದ ಸಂಭ್ರಮಿಸಿದರು. ವಿಜೇತರಿಗೆ ಸಂಸ್ಥೆ ವತಿಯಿಂದ ಪ್ರಶಂಸನಾ ಪತ್ರದ ಜತೆಗೆ ಬಹುಮಾನ ವಿತರಣೆ ಮಾಡಲಾಯಿತು.

    ಶಾಲೆಯ ಮುಖ್ಯಶಿಕ್ಷಕಿ ಆಶಾ ಆನಂದ್, ವ್ಯವಸ್ಥಾಪಕ ಆನಂದ್, ಜ್ಯೋತಿ ಯೋಗೇಶ್, ರೂಪೇಶ್ ಕುಮಾರ್, ಡಾ.ಪೃಥ್ವಿ, ಮೋಹನ್ ಬಾಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts