More

    ಮಕ್ಕಳಿಗೆ ಮಾನವೀಯ ಗುಣ ಕಲಿಸಿ

    ಕಕ್ಕೇರಿ: ಮಕ್ಕಳಿಗೆ ಉತ್ತಮ ಶಿಕ್ಷಣ ಜತೆಗೆ ಮಾನವೀಯ ಗುಣಗಳನ್ನು ಕಲಿಸಬೇಕು ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಹೇಳಿದರು.

    ಸ್ಥಳೀಯ ಜೆಕೆ ಕಾನ್ವೆಂಟ್ ಕಲ್ಪವೃಕ್ಷ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿ, ಶಾಲೆ ಉನ್ನತ ಮಟ್ಟದಲ್ಲಿ ಬೆಳೆಯಲು ಗ್ರಾಮಸ್ಥರು ಸಹಕರಿಸಬೇಕು ಎಂದರು.

    ಮಾಜಿ ಮಂಡಲ ಪಂಚಾಯತ್ ಪ್ರಧಾನ ಯಲ್ಲಪ್ಪ ಗುಪಿತ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಅತ್ಯವಶ್ಯ. ಹಾಗಾಗಿ ವಿದ್ಯೆ ನೀಡಲು ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
    ನಿವೃತ್ತ ಶಿಕ್ಷಕ ಪಿ.ಕೆ.ಫಿರೋಜಿ ಮಾತನಾಡಿ. ಶಾಲಾ ಮಕ್ಕಳು ಟಿವಿ ಹಾಗೂ ಮೊಬೈಲ್ಗಳಿಂದ ದೂರವಿದ್ದು ಓದು ಬರಹದ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.

    ಸಂಸ್ಥೆಯ ಅಧ್ಯಕ್ಷೆ ಅಶ್ವಿನಿ ಪಡವಾಳೇಕರ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಸೀಲ್ಡ್ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.

    ಸಂಸ್ಥಾಪಕಿ ಅನುರಾಧ ಬೋಸ್ಲೆ , ಸಿಆರ್‌ಪಿ ಈರಣ್ಣ, ಖಾನಾಪುರ ಅಗ್ನಿಶಾಮಕ ಅಧಿಕಾರಿ ಬಿ.ಕೆ.ಗಾಣಿಗೇರ, ಚನ್ನವೀರಯ್ಯ ಹಿರೇಮಠ, ಸಂಸ್ಥೆಯ ಉಪಾಧ್ಯಕ್ಷೆ ಅನುಪಮಾ ಚೌವಾಣ, ಮುಖ್ಯ ಶಿಕ್ಷಕಿ ಲತಾ ಹೊಸಮನಿ, ಶಿಕ್ಷಕಿಯರಾದ ಸ್ವಾತಿ ಜಾಧವ, ಗೀತಾ ಚೌವಾಣ, ರೇಷ್ಮಾ ಡಿಸೋಜ, ರೂಪಾ ಅಂಬೋಜಿ, ಲಕ್ಷ್ಮೀ ಮಿಟಗಾರ, ಸವಿತಾ ತುರುಮರಿ, ಗಾಯತ್ರಿ ಅಂಬಡಗಟ್ಟಿ, ಕಲ್ಪನಾ, ಕಾರ್ತಿಕ ಅಂಬಡಗಟ್ಟಿ, ಕಿರಣ ಬಸನಾಯಕ, ಲತಾ ಹೊಸಮನಿ, ಸಂಜನಾ ಬೋಸ್ಲೆ, ಕೋಮುದಿನಿ ಬೋಸ್ಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts