More

    ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ

    ರಾಮದುರ್ಗ, ಬೆಳಗಾವಿ: ಕುರುಬ ಸಮುದಾಯಕ್ಕೆ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆ ಇದೆ. ಸಾಕ್ಷರತೆ ಕೊರತೆಯಿಂದ ಸಮುದಾಯದಲ್ಲಿ ಮಹಾನ್ ಪುರುಷರ ಸಂದೇಶಗಳನ್ನು ಅರಿತುಕೊಳ್ಳುವ ಕಾರ್ಯ ನಡೆಯುತ್ತಿಲ್ಲ. ಸರ್ವರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಕರೆ ನೀಡಿದರು.

    ರಾಜ್ಯ ಪ್ರದೇಶ ಕುರುಬರ ಸಂಘದ ತಾಲೂಕು ಘಟಕ, ಕುರುಬ ನೌಕರರ ಸಂಘ, ಹಾಲುಮತ ಮಹಾಸಭಾ, ಪಟ್ಟಣದ ಪ್ರದೇಶ ಕುರುಬರ ಸಂಘ, ಮಹಿಳಾ ಘಟಕದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ 535ನೇ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಜನರಲ್ಲಿ ಸಮಯಪ್ರಜ್ಞೆ, ಸಂಸ್ಕಾರ ಬೆಳೆಸಲು ಗುರುಪೀಠ ಶ್ರಮಿಸುತ್ತಿದೆ. ಸಮಾಜ ಶೈಕ್ಷಣಿಕ ಹಾಗೂ ಸರ್ವರಂಗಗಳ ಪ್ರಗತಿಗೆ ಎಸ್.ಟಿ. ಮೀಸಲಾತಿ ಸಿಹಿಸುದ್ದಿ ಶೀಘ್ರ ದೊರೆಯಲಿದೆ ಎಂದರು.
    ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಕುರುಬ ಸಮುದಾಯದ ಜನತೆ ಶೈಕ್ಷಣಿಕ, ಸಾಮಾಜಿಕವಾಗಿ ಪ್ರಗತಿ ಹೊಂದಲು ಕಾಗಿನೆಲೆ ಕನಕಗುರುಪೀಠ ಸ್ಥಾಪನೆಯಾಗಿದೆ. ತಾಲೂಕಿನ ಸಮುದಾಯದವರು ಪತ್ತಿನ ಸಹಕಾರಿ ಸಂಘ ಸ್ಥಾಪಿಸಬೇಕು. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಪ್ರಯತ್ನಿಸಬೇಕು ಎಂದರು. ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಹಾಲಿನಷ್ಟೇ ಪವಿತ್ರರಾದ ಹಾಲುಮತ ಸಮುದಾಯದವರು ರಾಜಕೀಯ ಶಕ್ತಿ ಹೊಂದಿದಲ್ಲಿ ಮಾತ್ರ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದರು.

    ಕಟಕೋಳ ಸಿದ್ದರಾಯಜ್ಜನವರ ಮಠದ ಅಭಿನವ ಸಿದ್ದರಾಯ ಅಜ್ಜನವರು ಸಮ್ಮುಖ ವಹಿಸಿದ್ದರು. ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ವಿಠ್ಠಲ ಜಟಗನ್ನವರ ಅಧ್ಯಕ್ಷತೆ ವಹಿಸಿದ್ದರು. ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಮಾಜಿ ಶಾಸಕ ಅಶೋಕ ಪಟ್ಟಣ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿದರು.

    ಭವ್ಯ ಚಿಕ್ಕರೇವಣ್ಣ, ಬಸವರಾಜ ಹಿರೇರಡ್ಡಿ, ಜಿಪಂ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೀರಪ್ಪ ಕೊಂಗವಾಡ, ಮುಖಂಡರಾದ ಜಗದೀಶ ಕಾಮನ್ನವರ, ಸೋಮಶೇಖರ ಸಿದ್ಲಿಂಗಪ್ಪನವರ, ಬಸವರಾಜ ಕರಿಗಾರ, ಪ್ರದೇಶ ಕುರುಬರ ಸಂಘದ ರಾಜ್ಯ ಸಹಕಾರ್ಯದರ್ಶಿ ಅಶೋಕ ಮೆಟಗುಡ್ಡ, ಡಾ. ಸಿದ್ದಪ್ಪ ಕಟ್ಟೆಕಾರ ಇತರರಿದ್ದರು.

    ಭವ್ಯ ಮೆರವಣಿಗೆ: ಪಟ್ಟಣದ ಬೆಳಗಾವಿ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಡೊಳ್ಳು ಕುಣಿತ, ಸುಮಂಗಲೆಯರ ಆರತಿ, ಕುಂಭಮೇಳದೊಂದಿಗೆ ಪ್ರಾರಂಭಗೊಂಡ ಆಳೆತ್ತರದ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆ, ಸರ್ಕಾರಿ ಆಸ್ಪತ್ರೆಯ ಹುತಾತ್ಮ ಚೌಕ, ಹಳೇ ಪೊಲೀಸ್ ಠಾಣೆ ಎದುರಿನ ಜುನಿಪೇಠ ಮಾರ್ಗವಾಗಿ ಹಳೇ ಬಸ್ ನಿಲ್ದಾಣದ ಹತ್ತಿರ ಸಾಗಿ ಹಿರೇರಡ್ಡಿ ಆಯಿಲ್ ಮಿಲ್ ಆವರಣದಲ್ಲಿ ನಿರ್ಮಿಸಿದ ಮುಖ್ಯ ವೇದಿಕೆಗೆ ಅಗಮಿಸಿ ಸಮಾವೇಶಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts