More

    ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿ

    ಬೀಳಗಿ: ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಕೆಲಸವನ್ನು ಪಾಲಕರು ಹಾಗೂ ವಿದ್ಯಾವಂತರಾನ್ನಾಗಿ ಮಾಡುವ ಕೆಲಸವನ್ನು ಶಿಕ್ಷಕರು ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದು ಶಿರಹಟ್ಟಿಯ ಜಗದ್ಗುರು ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

    ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವೇಕಾನಂದ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ, ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಶಾಲೆಯಲ್ಲಿ ಸಿಗುವುದು ವಿದ್ಯೆ, ಮನೆಯಲ್ಲಿ ಸಿಗುವುದು ಬುದ್ದಿ. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಅವರಿಗೆ ಶಿಕ್ಷಣದ ಜತೆಯಲ್ಲಿ ಒಳ್ಳೆಯ ಸಂಸ್ಕಾರವುಳ್ಳ ಬುದ್ಧಿಯನ್ನು ಕೊಡಬೇಕು. ಎಲ್ಲರಲ್ಲಿಯೂ ಹಸಿವಿನ ಅರಿವು ಬರಬೇಕು. ನಮಗೆ ಬೇಕಾಗುವಷ್ಟು ಅನ್ನವನ್ನು ಮಾತ್ರ ಊಟಕ್ಕೆ ಬಡಿಸಿಕೊಳ್ಳಬೇಕು. ತುತ್ತು ಅನ್ನ ಕೆಡದಂತ್ತೆ ನೋಡಿಕೊಳ್ಳಬೇಕು ಎಂದರು.

    ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಮಾತನಾಡಿ, ಬೀಳಗಿಯಲ್ಲಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ 2500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಎಲ್‌ಕೆಜಿಯಿಂದ ಪಿಜಿಯವರೆಗೆ ಒಂದು ಸೂರಿನಲ್ಲಿ ವಿದ್ಯಾರ್ಜನೆ ನೀಡುತ್ತಿರುವುದು ಸ್ಮರಣೀಯ. ಸಹಕಾರಿ ಕ್ಷೇತ್ರದ ಬ್ಯಾಂಕ್, ಅನ್ನದಾತ ಕೇಂದ್ರ ಹಾಗೂ ಸಾಮಾಜಿಕ ಸೇವೆಯಲ್ಲಿ ಅಪಾರ ಕೊಡುಗೆ ನೀಡುತ್ತಿರುವುದು ಅವರ ಕಾರ್ಯ ಶ್ಲಾಘನೀಯ. ಮಾಜಿ ಸಚಿವರಾದ ಎಸ್.ಆರ್.ಪಾಟೀಲರು ಉತ್ತರ ಕರ್ನಾಟಕ ಒಬ್ಬ ಧೀಮಂತ ನಾಯಕರು ಮತ್ತು ರಾಜಕೀಯ ಜೀವನದಲ್ಲಿ ರಾಜ್ಯದ ಜನತೆ ಮತ್ತು ಭಾಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಉತ್ತರ ಕರ್ನಾಟಕ ಜನರು ಶಿಕ್ಷಣ, ಆರೋಗ್ಯ, ಸಹಕಾರಿ ಕ್ಷೇತ್ರದ ಬ್ಯಾಂಕ್ ಮತ್ತು ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಸಾವಿರಾರೂ ಜನರಿಗೆ ಉದ್ಯೋಗ ನೀಡಿದ ಭಗೀರಥ. ತಮ್ಮ ಸ್ವಗ್ರಾಮದಲ್ಲಿ 650 ಹಾಸಿಗೆವುಳ್ಳ ಹೈಟೆಕ್ ಆಸ್ಪತ್ರೆ ನಿರ್ಮಿಸಿ ಎಲ್ಲ ಸಮುದಾಯದ ಜನರಿಗೆ ಆರೋಗ್ಯ ಸಂಜಿವಿನಿಯಾಗಿದ್ದಾರೆ ಎಂದರು.

    ಮಾಜಿ ಸಚಿವ ಎಸ್.ಆರ್.ಪಾಟೀಲ ಅಧ್ಯಕ್ಷತೆ ವಹಿಸಿ ಹಾಗೂ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಎನ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀಳಗಿ ಪಟ್ಟಣ ಬ್ಯಾಂಕ್ಯ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ, ಸತ್ಯಪ್ಪ ಮೇಲ್ನಾಡ, ಜಮ್ ಶುಗರ್ಸ್ ನಿರ್ದೇಶಕ ರಾಮನಗೌಡ ಜಕ್ಕನಗೌಡ, ಎಸ್.ಆರ್.ಪಾಟೀಲ ಆಸ್ಪತ್ರೆ ಹಾಗೂ ಶಂಶೋಧನಾ ಕೇಂದ್ರ ಡೀನ್ ಧರ್ಮರಾಯ ಇಂಗಳೆ, ಭೀಮಸಿ ಮುಕಾಶಿ, ಡಿ.ಪಿ.ಅಮಲಝರಿ. ಧಾರವಾಡ ಪ್ರಾದೇಶಿಕ ವಿಜ್ಣಾನ ಕೇಂದ್ರದ ನಿರ್ದೇಶಕ ವೀರಣ್ಣ ಬೋಳಿಶಟ್ಟೆ, ಆಡಳಿತಾಧಿಕಾರಿ ಶಂಕರಗೌಡ ಪಾಟೀಲ, ಶೈಕ್ಷಣಿಕ ನಿರ್ದೇಶಕ ಡಿ.ಎಸ್.ಕುಂಠೆ, ಪಿ.ಸಿ.ಕಡಕೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts