More

    ಮಕ್ಕಳಲ್ಲಿ ಬಿತ್ತಿರಿ ಸಂಸ್ಕಾರ-ಸಂಸ್ಕೃತಿ ಎಂ.ಬಿ. ನಾಗರಾಜ್ ಕಾಕನೂರು ಹೇಳಿಕೆ – ಧಾರ್ಮಿಕ ಸಭಾ ಕಾರ್ಯಕ್ರಮ

    ದಾವಣಗೆರೆ: ತಾಯಂದಿರು ಮಕ್ಕಳಲ್ಲಿ ಸಂಸ್ಕಾರ- ಸಂಸ್ಕೃತಿ ಬಿತ್ತಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು.
    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ದಾವಣಗೆರೆ ಗ್ರಾಮಾಂತರ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಬೇತೂರು ರಸ್ತೆ ವಲಯ ಸಹಯೋಗದಲ್ಲಿ ನಗರದ ವೆಂಕಟೇಶ್ವರ ಸಮುದಾಯಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಎಲ್ಲಾ ಧರ್ಮೀಯರು ಒಗ್ಗೂಡಿ ಧಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಿರುವುದು ಈ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದ ಅವರು, ಪ್ರತಿ ಮನೆಯಲ್ಲಿಯೂ ಮಹಿಳೆಯರು ಮಹಾಲಕ್ಷ್ಮಿಯರೇ ಆಗಿರುತ್ತಾರೆ ಎಂದು ನಿದರ್ಶನಗಳೊಂದಿಗೆ ವಿವರಿಸಿದರು.
    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ. ಲಕ್ಷ್ಮಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಸ್ಥೆಯ ಯೋಜನೆಗಳ ಬಗ್ಗೆ ವಿವರಿಸಿದರು.
    ಒಕ್ಕೂಟದ ಅಧ್ಯಕ್ಷೆ ನಾಗರತ್ನಮ್ಮ ಆನೆಕೊಂಡ, ಮುಖಂಡರಾದ ಶಿವಲೀಲಾ ಕೊಟ್ರೇಶಯ್ಯ, ಸೈಯದ್ ಆರೀಫ್, ಎಂ. ಷಡಾಕ್ಷರಪ್ಪ ಬೇತೂರು ಇದ್ದರು. ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ಹಾಗೂ ಸದಸ್ಯರಿಗೆ ಗ್ರೀನ್‌ವೇ ಸ್ಟೌ, ಕಟ್ಟಿಗೆ ಒಲೆಯನ್ನು ವಿತರಿಸಲಾಯಿತು.
    ಯೋಜನಾಧಿಕಾರಿ ಯಶೋದಾ ಪ್ರಾಸ್ತಾವಿಕ ಮಾತನಾಡಿದರು. ಜಯಶ್ರೀ ಪ್ರಾರ್ಥನೆ ಹಾಡಿದರೆ, ಮೇಲ್ವಿಚಾರಕ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ದ್ಯಾಮಕ್ಕ ಮಂಜುನಾಥ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts