More

    ಮಕ್ಕಳಲ್ಲಿ ತಾಯಂದಿರು ದೇಶಪ್ರೇಮ ಬೆಳೆಸಿ

    ನಿಪ್ಪಾಣಿ: ಆಧುನಿಕ ಯುಗದಲ್ಲಿ ಬಹಳಷ್ಟು ಬದಲಾವಣೆಯಾಗುತ್ತಿದೆ. ಮೊದಲಿನ ಆಚಾರ-ವಿಚಾರಗಳು ಬದಲಾಗುತ್ತಿವೆ. ಆದರೆ, ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಲು ತಾಯಂದಿರಿಂದ ಮಾತ್ರ ಸಾಧ್ಯ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಜೊಲ್ಲೆ ಉದ್ಯೋಗ ಸಮೂಹ, ರಾಜಾ ಶಿವ ಛತ್ರಪತಿ ಸ್ಮಾರಕ ಮಂಡಳ ಮತ್ತು ಸ್ಥಳೀಯ ನಗರಸಭೆಯಿಂದ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ದೇಶಪ್ರೇಮ, ಮಹಿಳೆಯರ ರಕ್ಷಣೆ, ಪ್ರಜೆಗಳ ಹಿತ ಕಾಪಾಡುವುದು ಸೇರಿ ಹಲವಾರು ಸಂಸ್ಕಾರಗಳನ್ನು ಶಿವಾಜಿ ಮಹಾರಾಜರಿಗೆ ಬಾಲ್ಯದಲ್ಲಿ ತಾಯಿ ಹೇಳಿದ್ದರು. ಅವರಿಗೆ ಎಷ್ಟು ನಮಿಸಿದರೂ ಸಾಲದು ಎಂದರು.

    ತಾಯಂದಿರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಛತ್ರಪತಿ ಶಿವಾಜಿ, ಮಹಾತ್ಮ ಬಸವೇಶ್ವರರು, ಗೌತಮ ಬುದ್ಧರಂತಹ ಮಹನೀಯರ ಆದರ್ಶಗಳ ಕುರಿತು ಸಂಸ್ಕಾರ ಬಿಂಬಿಸುತ್ತ ಹಿಂದು ಧರ್ಮದ ಕುರಿತು ಸಾರಬೇಕು. ಆಗ ಮಕ್ಕಳು ದೊಡ್ಡವರಾಗಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವರು ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಗುಂದೇಶಾ, ಮ್ಯಾಗ್ನಂ ಟಫ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ, ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಸಚಿವೆ ಜೊಲ್ಲೆ ಜೀಜಾವು ಮಾತೆಯ ಪಾತ್ರದಲ್ಲಿ ಕಾಣಿಸಿಕೊಂಡರು. ಪರಂಪರೆಯನುಸಾರ ಶಿವಾಜಿ ಮಹಾರಾಜರ ನಾಮಕರಣ ನಡೆಯಿತು. ಅವಿನಾಶ ಪಾಟೀಲ, ರಾಜಾ ಶಿವ ಛತ್ರಪತಿ ಸ್ಮಾರಕ ಮಂಡಳದ ಅಧ್ಯಕ್ಷ ಶೀತಲ ಭಾಟಲೆ ಇತರರಿದ್ದರು.

    ಅರಟಾಳ ವರದಿ: ಶಿವಾಜಿಯವರ ಧರ್ಮನಿಷ್ಠೆ, ಶಿವಭಕ್ತಿ, ಸದಾಚಾರ ಹಾಗೂ ಸುಶೀಲದಂತಹ ಗುಣಗಳನ್ನು ಇಂದಿನ ಯುವಕರು ಬೆಳೆಸಿಕೊಳ್ಳಬೇಕು ಎಂದು ಯುವ ನಾಯಕ ದತ್ತಾತ್ರೇಯ ನಿಂಬಾಳಕರ ಹೇಳಿದರು. ಗ್ರಾಮ ಶಿವಾಜಿ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿ ತಾಯಿಯಿಂದ ಶೌರ್ಯ ಮತ್ತು ಸಾಹಸದ ಕಥೆಗಳನ್ನು ಕೇಳಿ ಬೆಳೆದ ಶಿವಾಜಿಯವರು ಮಹಾನ್ ವ್ಯಕ್ತಿಯಾಗಿ ಜಗತ್ತಿಗೆ ಆದರ್ಶವಾದರು ಎಂದರು. ಸ್ವರಾಜ್ಯ ತಮ್ಮೆಲ್ಲರ ಹೃದಯಕ್ಕೂ ಅತ್ಯಂತ ಹತ್ತಿರವಾದದು ಎಂಬುವುದನ್ನು ತಿಳಿಸಿದ ಮಹಾನ್ ಶಕ್ತಿ ಶಿವಾಜಿ ಮಹಾರಾಜರು. ವಿಧ್ಯಾರ್ಥಿಗಳು ಶಿವಾಜಿ ಮಹಾರಾಜರ ಜೀವನ ಚರಿತ್ರೆಗಳನ್ನು ಓದಿ ಅವರ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದರು. ಮನೋಹರ ಸಾಳುಂಕೆ, ರೂಪೇಶ ಘಾಟ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts