More

    ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸಲು ಸಲಹೆ

    ಚಿತ್ರದುರ್ಗ: ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಲು ಪಾಲಕರು ಆಸಕ್ತಿ ವಹಿಸ ಬೇಕೆಂದು ಎಎಸ್‌ಪಿ ಎಸ್.ಜೆ ಕುಮಾರಸ್ವಾಮಿ ಹೇಳಿದರು. ರಾಜ್ಯಬಾಲ ಭವನ ಸೊಸೈಟಿ,ಜಿಪಂ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 5-16 ವರ್ಷದ ಒಳಗಿನ ಮಕ್ಕಳಿಗೆ ಜಿಲ್ಲಾ ಬಾಲಭವನದಲ್ಲಿ ಹಮ್ಮಿ ಕೊಂಡಿರುವ ಬೇಸಿಗೆ ಶಿಬಿರದ ಅಂಗವಾಗಿ ಗುರುವಾರ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ,ಠಾಣೆ ವೀಕ್ಷಣೆ ಹಾಗೂ ಉಪನ್ಯಾಸ ಕಾರ‌್ಯ ಕ್ರಮದಲ್ಲಿ ಅವರು ಮಾತನಾಡಿದರು.

    ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ನಾನಾ ಕಾಯಿಲೆಗಳಿಗೆ ತುತ್ತಾಗಬಹುದು,ಮೊಬೈಲ್ ಬಳಕೆ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಮೂ ಡಿಸುವುದು ಅಗತ್ಯವಿದೆ. ಕಾನೂನಿನ ತಿಳಿವಳಿಕೆ ನೀಡುವ ಮೂಲಕ ಚಿಕ್ಕಂದಿನಿಂದಲೇ ಕಾನೂನೆಡೆ ಮಕ್ಕಳಲ್ಲಿ ಗೌರವ ಭಾವನೆ ಮೂಡಿಸಬೇಕಿದೆ. ಯಾವುದೇ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಯನ್ನು ಸಂಪರ್ಕಿಸು ವಂತೆ ಮನವಿ ಮಾಡಿದರು.

    ಪಿಐ ಗಿರಿರಾಜ್ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರೀಕ್ಷಣಾಧಿಕಾರಿ ಮಾರುತಿ,ಜಿಲ್ಲಾ ಬಾಲಭವನದ ಕಾರ‌್ಯ ಕ್ರಮ ಸಂಯೋಜಕ ಡಿ.ಶ್ರೀಕುಮಾರ,ನಗರ ಠಾಣೆ ಪಿಐ ಸಂತೋಷ್‌ಕುಮಾರ್,ಬೆರಳಚ್ಚು ವಿಭಾಗದ ಪಿಎಸ್‌ಐ ವಿಶ್ವನಾಥ್,ಪಿಎಸ್‌ಐ ಸಂಜೀವ್ ಕುಮಾರ್ ಹಾಗೂ ಸಿಬ್ಬಂದಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts