More

    ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ

    ಯಾದಗಿರಿ : ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಹಳ್ಳಿಗರಿಗೆ ಜ್ಞಾನಸುಧೆ ಹರಿಸುವ ಕೇಂದ್ರಗಳಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗರೀಮಾ ಪನ್ವಾರ್ ತಿಳಿಸಿದರು.

    ನಗರದ ತಾಪಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಗ್ರಂಥಾಲಯ ಮೇಲ್ವಿಚಾರಕರ ಮೂರು ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿ, ಸರ್ಕಾರ ಇಂದು ಗ್ರಾಮೀಣ ಜನರಲ್ಲಿ ಸಾP್ಷÀರತೆ ಬರಲಿ ಎಂಬ ಕಾರಣದಿಂದ ಗ್ರಾಪಂ ಗ್ರಂಥಾಲಯಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ ಎಂದರು.

    ಗ್ರAಥಾಲಯದಲ್ಲಿ ಕನಿಷ್ಠ ಮೂಲಭೂತ ಸೌಕರ್ಯದೊಂದಿಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ವ್ಯವಸ್ಥೆಯನ್ನು ಆಯಾ ಪಂಚಾಯಿತಿಯಿAದ ಪಡೆದುಕೊಳ್ಳುವಂತೆ ಸೂಚಿಸಿದ ಅವರು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಸಪತ್ರಿ, ದಿನಪತ್ರಿಕೆ ಮತ್ತು ಹೆಸರಾಂತ ಸಾಹಿತಿಗಳ ಪುಸ್ತಕ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಗ್ರಂಥಪಾಲಕರು ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳು ಗ್ರಂಥಾಲಯಕ್ಕೆ ಬರುವಂತೆ ಆಹ್ವಾನಿಸಬೇಕು. ಅಲ್ಲದೆ ಶೌಚಗೃಹ, ಶುದ್ಧ ಗಾಳಿ, ಕುಡಿವ ನೀರು, ವಿದ್ಯುತ್ ವ್ಯವಸ್ಥೆ ಮಾಡಬೇಕು. ಜನತೆ ಗ್ರಂಥಾಲಯಕ್ಕೆ ಬಂದರೆ, ಕನಿಷ್ಠ ಒಂದು ಗಂಟೆ ಕುಳಿತು ಪುಸ್ತಕ ಓದುವ ವಾತಾವರಣ ಕಲ್ಪಿಸಬೇಕು ಎಂದು ಹೇಳಿದರು.

    ತಾಪಂ ಇಒ ಬಸವರಾಜ ಶರಬೈ, ಶಿವಸುಂದರ್ ಕದ್ರೋಲಿ, ಸಹಾಯಕ ನಿರ್ದೇಶಕ ಖಾಲೀದ್ ಅಹ್ಮದ್, ಯೋಜನಾ ನಿರ್ದೇಶಕ ಶಶಿಧರ ಹಿರೇಮಠ, ಕಾಶೀನಾಥ, ವ್ಯವಸ್ಥಾಪಕ ಶಿವರಾಯ ಗುಂಡಗುರ್ತಿ, ವಿಷಯ ನಿರ್ವಾಹಕ ಅನ್ಸರ್ ಪÀಟೇಲ್, ಶಾರದಮ್ಮ ಅಡಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts