More

    ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಅಪರಾಧ

    ಲಕ್ಷ್ಮೇಶ್ವರ: ಮಕ್ಕಳು ದೇಶದ ಸಂಪತ್ತು. ಬಾಲ್ಯದಲ್ಲಿ ಅವರಿಗೆ ಉತ್ತಮ ಶಿಕ್ಷಣ, ಮಾರ್ಗದರ್ಶನ, ಸಂಸ್ಕಾರ ನೀಡುವ ಮೂಲಕ ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್. ಒಡೆಯರ ಹೇಳಿದರು.

    ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ವಿುಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ವಿುಕ ಯೋಜನಾ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ವಿುಕ ಪದ್ಧತಿ ನಿಮೂಲನೆಯ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಅಪರಾಧವಾಗಿದೆ. ಬಾಲ ಕಾರ್ವಿುಕ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದರೂ ಸಂಪೂರ್ಣ ನಿಮೂಲನೆಗೆ ಸಾರ್ವಜನಿಕರು, ಸಂಘ, ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬೇಕಾಗಿದೆ. 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ತೊಂದರೆಗೊಳಗಾದ ವಿವಿಧ ಕ್ಷೇತ್ರದ ಕಾರ್ವಿುಕರಿಗೆ ಸರ್ಕಾರ ಘೊಷಿಸಿದ ಪರಿಹಾರವನ್ನು ಕಾರ್ವಿುಕ ಇಲಾಖೆಯವರು ಶೀಘ್ರವೇ ಎಲ್ಲರಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು.

    ಕಿರಿಯ ದಿವಾಣಿ ನ್ಯಾಯಾಧೀಶ ಪ್ರತಾಪಕುಮಾರ ಎನ್, ಎಎಸ್​ಐ ಎಸ್.ಎಚ್. ಬೆಟಗೇರಿ, ಕಾರ್ವಿುಕ ಇಲಾಖೆ ಡಿಇಒ ಮಂಜುನಾಥ ಯತ್ನಟ್ಟಿ, ಕಾರ್ವಿುಕ ಸಂಘದ ಅಧ್ಯಕ್ಷ ದುರ್ಗಪ್ಪ ಬಿಂಜಡಗಿ, ಕಾರ್ಯದರ್ಶಿ ಮೌನೇಶ ಬಾಲೇಹೊಸೂರು, ರಾಮಚಂದ್ರ ಬಡಿಗೇರ, ಹಜರತ್ ಬಹದ್ದೂರ, ಚಂದ್ರಶೇಖರ ಸಾತಪೂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts