More

    ಭ್ರಷ್ಟಾಚಾರ ಎಸಗಿದರೆ ಪಕ್ಷದಿಂದಲೇ ಉಚ್ಚಾಟನೆ

    ವಿಜಯವಾಣಿ ಸುದ್ದಿಜಾಲ ಹಳಿಯಾಳ: ಪುರಸಭೆ ಮೂವರು ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ನನಗೆ ಸಾರ್ವಜನಿಕರು ಖುದ್ದು ದೂರು ನೀಡಿದ್ದಾರೆ. ಇದೊಂದು ತಲೆ ತಗ್ಗಿಸುವ ಘಟನೆ. ನನ್ನ ಮನಸ್ಸಿಗೆ ಬಾರಿ ನೋವಾಗಿದೆ. ಇದೇ ರೀತಿ ಭ್ರಷ್ಟಾಚಾರದಲ್ಲಿ ಮುಂದುವರಿದರೇ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುತ್ತೇನೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದರು.

    ಇಲ್ಲಿಯ ಬಸವನಗರದಲ್ಲಿ ಪುರಸಭೆಯ ಸಿಬ್ಬಂದಿಗಾಗಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ವಸತಿಗೃಹವನ್ನು ಮಂಗಳವಾರ ಉದ್ಘಾಟಿಸಿದ ಅವರು, ಸಾರ್ವಜನಿಕರೆದುರೇ ಪುರಸಭೆಯ ಕಾಂಗ್ರೆಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಪುರಸಭೆಯ ಅಭಿವೃದ್ಧಿಗಾಗಿ ಈವರೆಗೆ ಸಾಕಷ್ಟು ಅನುದಾನವನ್ನು ನಾನು ತಂದಿದ್ದೇನೆ, ಮುಂದೇ ಅನುದಾನವನ್ನು ಹೇಗೆ ತರುವುದು ನನಗೆ ಗೊತ್ತಿದೆ.

    ಅಭಿವೃದ್ಧಿಗೆ ತಂದ ಅನುದಾನ ಸರಿಯಾದ ಬಳಕೆಯಾಗುವಂತೆ ಸದಸ್ಯರು ನೋಡಿಕೊಳ್ಳಬೇಕು. ಒಳ್ಳೆಯ ಯೋಜನೆಯೊಂದಿಗೆ ನೀವು ಕ್ರಿಯಾಶೀಲರಾಗಬೇಕೆ ಹೊರತು, ಯಾವುದೇ ರೀತಿಯ ಭ್ರಷ್ಟಾಚಾರ, ಅವ್ಯವಹಾರಕ್ಕೆ ಅವಕಾಶ ನೀಡಬಾರದು. ನಾನು ಎಲ್ಲಿದ್ದರೂ ಎಲ್ಲ ಇಲಾಖೆಗಳ ಮೇಲೆ, ಜನಪ್ರತಿನಿಧಿಗಳ ಮೇಲೆ ಸದಾ ನಿಗಾವಹಿಸಿರುತ್ತೇನೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರು ಜನರಿಂದ ಹಣ ಪಡೆದಿದ್ದಾರೆ ಎಂಬ ದೂರು ನನ್ನ ಬಳಿ ಬಂದ ತಕ್ಷಣ ಪುರಸಭೆಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ ಎಂದರು.

    ಪುರಸಭೆಯ ಅಧ್ಯಕ್ಷ ಅಜರ್​ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣ ಮಾದರ, ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಜಿಪಂ ಸದಸ್ಯ ಕೃಷ್ಣ ಪಾಟೀಲ, ಲಕ್ಷ್ಮೀ ಕೊರ್ವೆಕರ ಇತರರು ಇದ್ದರು.

    ಉದ್ಘಾಟನೆ: ಕೈಗಾರಿಕಾ ಬಡಾವಣೆ ಬಳಿ ನಿರ್ವಣಗೊಂಡ ಎಸ್.ಟಿ ಬಾಲಕರ ವಸತಿ ನಿಲಯವನ್ನು, ಹವಗಿ ಗ್ರಾಮದಲ್ಲಿ ಸಿದ್ಧಿ ಭವನ, ಹಾಗೂ ಆಶ್ರಮ ಶಾಲೆಯನ್ನು, ಜೈನ್ ಬಸದಿ ಬಳಿ ನಿರ್ವಣಗೊಂಡ ಯಾತ್ರಿ ನಿವಾಸವನ್ನು ಉದ್ಘಾಟಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts