More

    ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಶ್ರೀರಾಮಸೇನೆ ಆಗ್ರಹ 

    ದಾವಣಗೆರೆ: ರಾಜ್ಯದಲ್ಲೇ ಹೆಚ್ಚಿನ ಭ್ರಷ್ಟಾಚಾರ ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಶ್ರೀರಾಮಸೇನೆ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷ ಮಣಿ ಸರ್ಕಾರ್, ಲಂಚಗುಳಿತನ ವಿರುದ್ಧ ಜಿಲ್ಲಾಡಳಿತ, ಜಿಪಂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪಂಚಾಯತ್‌ರಾಜ್ ಇಂಜಿನಿಯರ್ ಸಹಿ ಮಾಡಿಕೊಟ್ಟರೂ ನಿವೇಶನಗಳ ತಾಂತ್ರಿಕ ಅನುಮೋದನೆಗಾಗಿ ಲಂಚ ಕೇಳಿದ ಹರಿಹರ ತಾಪಂ ಇಒ ಹಾಗೂ ಪಿಡಿಒ ಲೋಕಾಯುಕ್ತ ಬಂಧನಕ್ಕೆ ಒಳಗಾಗಿದ್ದಾರೆ. ಸಾರಥಿ ಪಿಡಿಒ 13 ವರ್ಷಗಳಿಂದ 3 ಪಂಚಾಯಿತಿಯಲ್ಲಿ ಏಕಕಾಲಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸಿಇಒಗೆ ತಿಳಿದಿಲ್ಲವೇ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ಪಾಲಿಕೆ ಸದಸ್ಯರೊಬ್ಬರ ಮನೆಯಲ್ಲಿಯೇ ಅವ್ಯವಹಾರ ನಡೆದಿರುವುದು ಬಯಲಾಗಿರುವ ಹಿನ್ನೆಲೆಯಲ್ಲಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮೇಲಧಿಕಾರಿಗಳಿಗೂ ಲಂಚ ನೀಡಬೇಕು ಎಂದು ಆರೋಪಿಗಳು ಹೇಳಿಕೆ ನೀಡಿದ್ದರ ಹಿಂದೆಯೂ ಹಿರಿಯ ಅಧಿಕಾರಿಗಳೂ ಲಂಚಗುಳಿತನದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಹೇಳಿದರು.
    ಮುಂದಿನ ದಿನಗಳಲ್ಲಿ ಯಾವುದೇ ಇಲಾಖಾಧಿಕಾರಿಗಳು, ಸಾರ್ವಜನಿಕ ಕೆಲಸಕ್ಕಾಗಿ ಲಂಚಕ್ಕೆ ಕಿರುಕುಳ, ಬೇಡಿಕೆ ಇಟ್ಟರೆ ಸಂಘಟನೆಯಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಿಗಿಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪಿ.ಸಾಗರ್, ಬಿ.ಜಿ.ರಾಹುಲ್, ಅನಿಲ್ ಸುರ್ವೆ, ಶ್ರೀರ್, ಶ್ರೀಧರ್ ಕಮ್ಮಾಸ್, ಅಜೇಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts