More

    ಭೀಮಾ ಕೋರೆಗಾಂವ್ ವಿಜಯ ದಿನ ಆಚರಣೆ

    ಬೇಲೂರು: ಪಟ್ಟಣದಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಒಕ್ಕೂಟದಿಂದ ಮಂಗಳವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.

    ನೆಹರುನಗರದಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಕಾರ್ಯಕರ್ತರು ಅಂಬೇಡ್ಕರ್ ನಗರದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿದ್ದ ಕೋರೆಗಾಂವ್ ವಿಜಯಸ್ತಂಭದ ಬಳಿ ತೆರಳಿ ಗೌರವ ಸಲ್ಲಿಸಿದರು.

    ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಜನವರಿ1, 1818 ರಂದು ಭೀಮಾ ಕೋರೆಗಾಂವ್‌ನಲ್ಲಿ ಮಹರ್ ವೀರಯೋಧರು ಶೋಷಿತರ ವಿಮೋಚನೆಗಾಗಿ ಪ್ರಾಣತ್ಯಾಗ ಮಾಡಿ ಅಸ್ಪಶ್ಯ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಟ್ಟ ಚಾರಿತ್ರಿಕ ದಿನ. ಆದ್ದರಿಂದ ಈ ಮಹಾನ್ ವೀರ ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

    ಆದರೆ ಬಿಜೆಪಿ ಸರ್ಕಾರದ ಕೆಲವರು ಸಂವಿಧಾನದ ಬಗ್ಗೆ ಅಪಸ್ವರದ ಮಾತುಗಳನ್ನಾಡುತ್ತಿದ್ದು, ಸಮುದಾಯಕ್ಕೆ ಬೇಸರ ತರಿಸಿದೆ. ನಮಗೆ ಸಂವಿಧಾನ ಸಂರಕ್ಷಿಸಿ ಅಂಬೇಡ್ಕರ್ ಸಿದ್ಧಾಂತವನ್ನು ಒಪ್ಪುವ ಮನಸ್ಥಿತಿಯುಳ್ಳ ಸರ್ಕಾರಗಳು ಬರಬೇಕಿದೆ ಎಂದರು.

    ದಲಿತ ಮುಖಂಡ ಬಾಬು ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಒಂದಾದರೆ ವಿಧಾನಸಭಾ ಸದಸ್ಯರನ್ನು ಸೃಷ್ಟಿಸಬಹುದು. ಕೇವಲ ಭಾಷಣ ಮಾಡಿದರೆ ಸಾಲದು. ರಾಜಕೀಯ ಸ್ಥಾನಮಾನ ಅಗತ್ಯವಿದೆ ಎಂದರು.

    ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಗೋವಿನಹಳ್ಳಿ ರವಿ, ಬೆಂಗಳೂರಿನ ಎ.ಜಿ,ಖಾನ್, ಬಂಟೇನಹಳ್ಳಿ ಇಸ್ಮಾಯಿಲ್, ಲಕ್ಷ್ಮಣ್, ಆಶೋಕ್, ರವೀಶ್, ನೂರ್‌ಅಹಮದ್, ಶಶಿಧರ್, ಯೋಗೀಶ್, ವೆಂಕಟೇಶ್, ರಾಯಪುರ ರವಿ, ಮಧು, ಮಂಜುನಾಥ್, ಹನುಮಂತ, ಗಿರೀಶ್, ಹರೀಶ್, ನಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts