More

    ಭೀಮಾಶಂಕರ ಸಕ್ಕರೆ ಕಾರ್ಖಾನೆ ಕಾರ್ಯ ಸ್ಮರಣೀಯ

    ಉಮದಿ: ಇಂಡಿ ತಾಲೂಕಿನ ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಸರ್ವೋದಯ ಪರಿವಾರ ಹಾಗೂ ಉಮದಿ ಜನರಿಂದ ಸ್ಥಳೀಯ ಸರ್ವೋದಯ ಶಿಕ್ಷಣ ಸಂಸ್ಥೆಯ ಎಂ.ವಿ.ಹೈಸ್ಕೂಲ್ ಆವರಣದಲ್ಲಿ ನಡೆಯಿತು.

    ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಕೆ ಹೊರ್ತಿಕರ ಮಾತನಾಡಿ, ಇಂಡಿ ತಾಲೂಕು ಹಾಗೂ ಮಹಾರಾಷ್ಟ್ರ ಗಡಿಯ ಜತ್ತ ತಾಲೂಕಿನ ಅನೇಕ ಗ್ರಾಮಗಳ ರೈತರ ಜೀವನಾಡಿಯಾಗಿ ಭೀಮಾಶಂಕರ ಸಕ್ಕರೆ ಕಾರ್ಖಾನೆ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವುದು ಸ್ಮರಣೀಯ ಎಂದರು.

    ಜಿಪಂ ಮಾಜಿ ಸದಸ್ಯ ಚನ್ನಪ್ಪ ಹೊರ್ತಿ ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು ಎಂದು ಶಾಸಕರಾದ ಯಶವಂತರಾಯ ಪಾಟೀಲ, ವಿಠ್ಠಲ ಕಟಕದೊಂಡ ಅವರಿಗೆ ಮನವಿ ಮಾಡಿದರು.

    ಶಾಸಕ ವಿಠ್ಠಲ ಕಟಕದೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಲ್ಲಿನ ಸಮಸ್ಯೆಗಳ ಬಗ್ಗೆ ನಾವು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸರಿಪಡಿಸುವುದಾಗಿ ಭರವಸೆ ನೀಡಿದರು.

    ಶಾಸಕ ಯಶವಂತರಾಯ ಪಾಟೀಲ ಮಾತನಾಡಿ, ನಾನು ಸಾಕಷ್ಟು ಬಾರಿ ಈ ಭಾಗದಲ್ಲಿ ಸಂಚರಿಸಿದ್ದೇನೆ. ಇಲ್ಲಿ ಜನರು ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಮಗೆ ಮನವರಿಕೆಯಾಗಿದೆ. ಗಡಿ ಭಾಗದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಿದಕ್ಕೆ ನಾವು ಚಿರಋಣಿಯಾಗಿದ್ದೇವೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯ ಈ ಸಂಬಂಧ ಭಾವನಾತ್ಮಕವಾಗಿದೆ ಎಂದರು.

    ಉಮದಿ ಗ್ರಾಮ ಪಂಚಾಯಿತಿ ಉಪಸರಪಂಚ ಅಶೋಕ ಮಾಶಳ, ಮುಖಂಡರಾದ ಎಂ.ಆರ್. ಪಾಟೀಲ, ಬಿ.ಎಂ.ಕೋರಿ, ಸುರೇಶ ಪಾಟೀಲ, ಸಿದ್ದನಗೌಡ ಪಾಟೀಲ, ನಾಗು ನೀರಾಳೆ, ಬಸವರಾಜ ಪಾಟೀಲ, ರಾಜು ಡೋಣಗಾವ, ಸಂಸ್ಥೆಯ ಅಧ್ಯಕ್ಷ ಮಹಾದೇವಪ್ಪ ಹೊರ್ತಿ, ಉಪಾಧ್ಯಕ್ಷ ರೇವಪ್ಪ ಲೋಣಿ, ಅಮಗೊಂಡ ಪಾಟೀಲ, ಮಾನಸಿದ್ದ ಪೂಜಾರಿ, ಸಂಸ್ಥೆಯ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಸರಪಂಚ, ಉಪಸರಪಂಚ, ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts