More

    ಸಂಸ್ಕೃತದಲ್ಲಿ ವಿಜ್ಞಾನ, ಸಂಸ್ಕೃತಿ ಅಡಕ

    ಶಿವಮೊಗ್ಗ: ಸಂಸ್ಕೃತ ಕೇವಲ ಭಾಷೆಯಲ್ಲ. ಅದರಲ್ಲಿ ವಿಜ್ಞಾನ ಮತ್ತು ಸಂಸ್ಕೃತಿ ಅಡಕವಾಗಿದೆ ಎಂದು ಲೋಕಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ. ಸದಾನಂದ ದೀಕ್ಷಿತ್ ತಿಳಿಸಿದರು.

    ನಗರದ ಬಿ.ಬಿ.ರಸ್ತೆಯ ಸಂಸ್ಕೃತ ಭವನಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದಲ್ಲಿ ಸಂಸ್ಕೃತ ಭಾಷೆ ಅವಶ್ಯಕತೆ ವಿಷಯದ ಕುರಿತು ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಪರಿಚಯವಾಗಬೇಕಾದರೆ ಸಂಸ್ಕೃತ ಕಲಿಕೆ ಅನಿವಾರ್ಯ. ದೇಶದ ಎಲ್ಲರನ್ನೂ ಒಗ್ಗೂಡಿಸುವ ಮತ್ತು ಭಾವೈಕ್ಯ ಮೂಡಿಸುವ ಶಕ್ತಿ ಸಂಸ್ಕೃತಕ್ಕಿದೆ ಎಂದು ಹೇಳಿದರು.
    ರಾಷ್ಟ್ರೀಯ ಉಪಾಧ್ಯಕ್ಷ ರಮೇಶ ಜೋಯಿಸ್ ಮಾತನಾಡಿ, ಸಂಸ್ಕೃತ ಕಲಿಕೆಯ ಮಹತ್ವವನ್ನು ಇಡೀ ಜಗತ್ತಿಗೆ ಹೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ತಂತ್ರಜ್ಞಾನ, ವಿಜ್ಞಾನ, ಆಯುರ್ವೇದ, ಯೋಗ ಮುಂತಾದ ವಿಷಯಗಳ ಮೂಲ ಸಂಸ್ಕೃತ ಸಾಹಿತ್ಯದಲ್ಲಿದೆ ಎಂದರು.
    ಯಾವುದೇ ರಾಷ್ಟ್ರದಲ್ಲಿ ಸಾಮರಸ್ಯ ಕುಂದುತ್ತಿರುವುದಕ್ಕೆ ನೈತಿಕ ಶಿಕ್ಷಣದ ಕೊರತೆಯೇ ಕಾರಣ. ಸಂಸ್ಕೃತ ಸಾಹಿತ್ಯ, ಸುಭಾಷಿತ, ನಾಟಕ, ಕಾವ್ಯಗಳ ಅಧ್ಯಯನದಿಂದ ನೈತಿಕ ಶಿಕ್ಷಣ ದೊರೆಯುತ್ತದೆ ಎಂದು ತಿಳಿಸಿದರು.
    ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳ 21 ವಿದ್ವಾಂಸರು ಈ ಸಂದರ್ಭದಲ್ಲಿದ್ದರು. ಸಂಸ್ಕೃತ ಭವನದ ಕೋಶಾಧ್ಯಕ್ಷ ಸಚ್ಚಿದಾನಂದ, ಪ್ರಮುಖರಾದ ಅ.ನಾ.ವಿಜಯೇಂದ್ರ ರಾವ್, ಜಗದೀಶ್, ಮನು ಚವ್ಹಾಣ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts