More

    ಭೀಮಾತೀರದ ಫೈರಿಂಗ್ ಪ್ರಕರಣ : ಅಖಾಡಕ್ಕಿಳಿದ ಐಜಿಪಿ

    ವಿಜಯಪುರ: ಭೀಮಾತೀರದ ಸಾಹುಕಾರ್ ಮೇಲೆ ಗುಂಡಿನ ದಾಳಿಯಲ್ಲಿ ಪ್ರಕರಣ ಸಾಕಷ್ಟು ವಲಯದಲ್ಲಿ ತನಿಖೆ ಮಾಡಲಾಗುತ್ತಿದೆ. ಇನ್ನು ಹಳೆಯ ಕೇಸ್ ಕುರಿತು ಕೂಡ ತನಿಖೆ ಮಾಡಲಾಗುವುದು ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮಾಹಿತಿ ನೀಡಿದರು..

    ವಿಜಯಪುರದ ಅರಕೇರಿ ತಾಂಡಾದ ಬಳಿಯ ಘಟನಾ ಸ್ಥಳದಲ್ಲಿ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪ್ರಕರಣ ಸಾಕಷ್ಟು ಮಾಹಿತಿ ಕಲೆಹಾಕಲಾಗಿದೆ. ಅಲ್ಲದೇ, ಐದು ಬೈಕ್, ಒಂದು ಟಿಪ್ಪರ, ಪೆಟ್ರೋಲ್ ಬಾಂಬ್, ಮಚ್ಚು ಜಪ್ತಿ ಮಾಡಲಾಗಿದೆ ಎಂದರು. ಇನ್ನು ಶೂಟೌಟ್ ಗೂ ಮುನ್ನ ದುಷ್ಕರ್ಮಿಗಳು ಎಲ್ಲ ರೀತಿಯ ತಯಾರಿ ಮಾಡಿಕೊಂಡು ಬಂದಿದ್ರು, ಅಲ್ಲದೇ, ವಿವಿಧ ವಾಹನಗಳಲ್ಲಿ ಪರಾರಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದರು..

    ಈ ಗ್ಯಾಂಗ್ ವಾರನಲ್ಲಿ ಸುಮಾರು 15 ರಿಂದ 20 ಜನರು ಭಾಗಿಯಾಗಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದ್ದು, ವಿಜಯಪುರ, ಬಾಗಲಕೋಟ ಹಾಗೂ ಬೆಳಗಾವಿಯ 1500 ಪೊಲೀಸರ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದರು…

    ಅಲ್ಲದೇ, ಹಳೆಯ ಚಡಚಣ ಕೇಸ್ ನಲ್ಲೂ ತನಿಖೆ ಮಾಡಲಾಗುವುದು. ಮತ್ತೇ ಕಲಬುರಗಿ, ವಿಜಯಪುರದಲ್ಲಿ ಹಳೆಯ ಗ್ಯಾಂಗ್ ಆ್ಯಕ್ಟಿವ್ ಆಗಿವೆ. ಅದರ ಬೆನ್ನಿನಲ್ಲೂ ತನಿಖೆ ಕೈಗೊಳ್ಳಲಾಗುವುದು. ಒಂದು ವಾರದ ಒಳಗೆ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts