More

    ಭೀಮರಾವ್‌ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ

    ಚಿತ್ರದುರ್ಗ: ಶಿಕ್ಷಣ, ಸಂಘಟನೆ, ಹೋರಾಟ ಈ ಮೂರಕ್ಕೆ ಆದ್ಯತೆ ನೀಡಿದಾಗ ಬದಲಾವಣೆ ಸಾಧ್ಯ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಪನ್ಯಾಸಕ ಡಾ.ಬಿ.ಕೃಷ್ಣಪ್ಪ ಹೇಳಿದರು.

    ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಲೇಜಿನಿಂದ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸರ್ವರೂ ಸಮಾನರಾಗಿ ಬಾಳಬೇಕು ಎಂಬುದು ಅವರ ಆಶಯವಾಗಿತ್ತು. ಅದಕ್ಕಾಗಿ ವಿಶ್ವದ ಎಲ್ಲಾ ಸಂವಿಧಾನ ಅಧ್ಯಯನ ಮಾಡಿದ ನಂತರ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತಕ್ಕೆ ಕೊಡುಗೆಯಾಗಿ ನೀಡಿದರು. ಆ ಆಶಯಗಳು ಈಡೇರಲು ಎಲ್ಲರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.

    ಪತ್ರಕರ್ತ ಎಂ.ಎನ್.ಅಹೋಬಲಪತಿ ಮಾತನಾಡಿ, ಪ್ರಜಾತಾಂತ್ರಿಕ ವ್ಯವಸ್ಥೆ ಗೌರವಿಸುವ, ಅದರಂತೆ ನಡೆದುಕೊಳ್ಳುವ ಸಲುವಾಗಿ ಅಂಬೇಡ್ಕರ್ ಕುರಿತು ಓದಿ ಅರ್ಥೈಸಿಕೊಳ್ಳಬೇಕು. ಇದೇ ಒಂದು ರೀತಿ ದೊಡ್ಡ ಜ್ಞಾನವಿದ್ದಂತೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಂತಲ್ಲ. ಆಧುನಿಕ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ಬಾಳಲು ಅವರು ನಮಗೆ ದಾರಿದೀಪವಾಗಿದ್ದಾರೆ ಎಂದರು.

    ಪಿಯುಡಿಡಿ ಪುಟ್ಟಸ್ವಾಮಿ, ಪ್ರಾಂಶುಪಾಲ ಎಚ್.ಪಿ.ನರಸಿಂಹಮೂರ್ತಿ, ಉಪನ್ಯಾಸಕರಾದ ಡಾ.ಬಿ.ಎಂ.ಗುರುನಾಥ್, ಮೋಹನ್, ಚಂಪಕಲಾ, ಶ್ರೀನಿವಾಸ, ದೊಡ್ಡಪ್ಪ, ಹೇಮಂತರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts