More

    ಭಾಷೆ, ಸಂಸ್ಕೃತಿಯ ಉಳಿವೇ ಕೊಡವರ ಅಸ್ತಿತ್ವ

    ಸೋಮವಾರಪೇಟೆ: ಕೊಡವಭಾಷೆ, ಸಂಸ್ಕೃತಿ ಉಳಿಸಿ, ಬೆಳೆಸಿದರೆ, ಜನಾಂಗದ ಅಸ್ತಿತ್ವ ಉಳಿಯುತ್ತದೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತೀತಿರ ರೋಷನ್ ಅಪ್ಪಚ್ಚು ಅಭಿಪ್ರಾಯಪಟ್ಟರು.
    ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪುತ್ತರಿ ಊರೊರ‌್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಕೊಡವ ಜನಾಂಗ ಒಗ್ಗಟ್ಟಾದರೆ ಮಾತ್ರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೊಡವ ಉಡುಗೆ, ತೊಡುಗೆ, ಪದ್ಧತಿ, ಸಂಪ್ರದಾಯವನ್ನು ಮುಂದಿನ ಪಿಳಿಗೆಗೆ ತಿಳಿಸುವ ಕೆಲಸವಾಗಬೇಕು.
    ರಾಜ್ಯ ಸರ್ಕಾರದ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಪ್ರಕೃತಿ, ನದಿ, ಕಾಡುಗಳನ್ನು ದೇವರೆಂದು ಆರಾಧಿಸುವ ವಿಶಿಷ್ಟ ಜನಾಂಗ ಕೊಡವರು. ಮುಂದೆಯೂ ಕೊಡಗಿನ ಪರಿಸರ, ಪ್ರಾಣಿ ಸಂಕುಲವನ್ನು ರಕ್ಷಿಸಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯಲ್ಲಿ ಕೊಡವರ ಜನಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಕೊಡಗಿನ ಮೂಲನಿವಾಸಿಗಳು, ನಗರ ಪ್ರದೇಶಗಳಲ್ಲಿ ಹಣ ಸಂಪಾದಿಸಿದವರು, ಕೊಡಗಿನಲ್ಲಿ ಆಸ್ತಿಯನ್ನು ತೆಗೆದುಕೊಳ್ಳಬೇಕು. ದುಡಿದ ಹಣವನ್ನು ಕೊಡಗಿನಲ್ಲೇ ವಿನಿಯೋಗಿಸಬೇಕು ಎಂದು ಮನವಿ ಮಾಡಿದರು,
    ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ನಾಪಂಡ ರವಿ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಮಾಜದ ಅಧ್ಯಕ್ಷ ಮಾಳೇಟಿರ ಬಿ. ಅಭಿಮನ್ಯುಕುಮಾರ್, ಗರಗಂದೂರು ಗ್ರಾಮದ ಕಾಫಿ ಬೆಳೆಗಾರ ಮಂಡೇಟ್ಟಿರ ಅನಿಲ್ ಪೊನ್ನಪ್ಪ, ಬೆಂಗಳೂರು ಕೊಡವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ತೀತಿರ ಶರ್ಮಿಲಿ ಅಪ್ಪಚ್ಚು, ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೆರ ಅನಿಲ್, ಮಹಿಳಾ ಘಟಕದ ಅಧ್ಯಕ್ಷೆ ಕೋಚಮಂಡ ಮನುಬಾಯಿ ಇದ್ದರು.
    ಗರ್ವಾಲೆ ಗ್ರಾಮದ ಶ್ರೀ ಬೊಟ್ಲಪ್ಪ ತಂಡದವರಿಂದ ಕೊಲಾಟ್, ಮುವತ್ತೊಕ್ಲು ಮೌಂಟ್‌ವೇಲಿಡ್ಯು ತಂಡವರಿಂದ ಉಮ್ಮತ್ತಾಟ್ ಪ್ರದರ್ಶನಗೊಂಡಿತು. ಯುವಕ, ಯುವತಿ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts